ADVERTISEMENT

ಉತ್ತರ ಕೊರಿಯಾದತ್ತ ಕ್ಷಿಪಣಿ ಹಾರಿಸಿದ ದಕ್ಷಿಣ ಕೊರಿಯಾ

ಕ್ಷಿಪಣಿ ಹಾರಿಸಿದ್ದ ಉತ್ತರ ಕೊರಿಯಾಗೆ ದಕ್ಷಿಣ ಕೊರಿಯಾ ಉತ್ತರ

ಏಜೆನ್ಸೀಸ್
Published 2 ನವೆಂಬರ್ 2022, 6:49 IST
Last Updated 2 ನವೆಂಬರ್ 2022, 6:49 IST
   

ಸಿಯೋಲ್: ಯುದ್ಧ ವಿಮಾನದ ಮೂಲಕ ನಿರ್ದೇಶಿತ ಗುರಿಯನ್ನು ಹೊಂದಿದ್ದ ಮೂರು ಕ್ಷಿಪಣಿಗಳನ್ನು ಉತ್ತರ ಕೊರಿಯಾ ಗಡಿಯತ್ತ ಹಾರಿಸಲಾಗಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಇತ್ತೀಚೆಗಷ್ಟೇ ಉತ್ತರ ಕೊರಿಯಾ, ದಕ್ಷಿಣ ಕೊರಿಯಾದತ್ತ ಕ್ಷಿಪಣಿ ಉಡಾಯಿಸಿತ್ತು. ಅದಕ್ಕೆ ಉತ್ತರವಾಗಿ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾದತ್ತ ಕ್ಷಿಪಣಿ ಹಾರಿಸಿದೆ.

ಉತ್ತರ ಕೊರಿಯಾ ಉಡಾಯಿಸಿದ್ದ ಕ್ಷಿಪಣಿ, ದಕ್ಷಿಣ ಕೊರಿಯಾದ ಕಡಲ ತೀರಕ್ಕೆ ಅಪ್ಪಳಿಸಿತ್ತು.

ADVERTISEMENT

ಅಲ್ಲದೆ, ಉಭಯ ರಾಷ್ಟ್ರಗಳ ಮಧ್ಯೆ ಶೀತಲ ಸಮರ ಮುಂದುವರಿದಿದೆ.

ಕಳೆದ ತಿಂಗಳಿನಲ್ಲಿ ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿ, ಹೆಚ್ಚಿನ ಶಸ್ತ್ರಾಸ್ತ್ರ ಜಮಾವಣೆ ಮಾಡಿಕೊಂಡಿರುವ ಬಗ್ಗೆ ಹೇಳಿಕೆ ನೀಡಿತ್ತು. ಆ ಸಂದರ್ಭದಲ್ಲಿ ಅಮೆರಿಕ, ದಕ್ಷಿಣ ಕೊರಿಯಾಗೆ ಬೆಂಬಲ ನೀಡುವುದಾಗಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.