ADVERTISEMENT

40ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರನ್ನು ಗುರಿಯಾಗಿಸಿ ಪೆಗಾಸಿಸ್‌ ಸ್ಪೈವೇರ್‌ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜುಲೈ 2021, 17:00 IST
Last Updated 18 ಜುಲೈ 2021, 17:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಗಾಸಿ‌ಸ್‌ ಎಂಬ ಸ್ಪೈವೇರ್‌ 40ಕ್ಕೂ ಹೆಚ್ಚು ಭಾರತೀಯರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿದೆ. ಪತ್ರಕರ್ತರ ಫೋನ್‌ಗಳನ್ನು ಹ್ಯಾಕ್‌ ಮಾಡಲಾಗಿದೆ.

ಹಿಂದೂಸ್ತಾನ್‌ ಟೈಮ್ಸ್‌, ದಿ ಹಿಂದೂ, ದಿ ವೈರ್‌, ಇಂಡಿಯನ್‌ ಎಕ್ಸ್‌ಪ್ರೆಸ್‌, ನ್ಯೂಸ್‌ 18, ಇಂಡಿಯಾ ಟುಡೇ, ಪಯೊನೀರ್‌ ಮಾಧ್ಯಮಗಳ ಪತ್ರಕರ್ತರು ಸೇರಿದಂತೆ ಫ್ರೀಲ್ಯಾನ್ಸರ್‌, ಅಂಕಣಕಾರರು ಮತ್ತು ಪ್ರಾದೇಶಿಕ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರನ್ನು ಗುರಿಯಾಗಿರಿಸಲಾಗಿದೆ ಎಂದು ದಿ ವೈರ್‌ ವರದಿ ಮಾಡಿದೆ.

2019ರ ಲೋಕಸಭಾ ಚುನಾವಣೆ ನಿಟ್ಟಿನಲ್ಲಿ 2018 ಮತ್ತು 2019ರಲ್ಲಿ ಸಕ್ರಿಯರಾಗಿದ್ದ ಪತ್ರಕರ್ತರನ್ನು ಗುರಿಯಾಗಿಸಲಾಗಿದೆ. ಪೆಗಾಸಿಸ್‌ ಎಂಬುದು ಇಸ್ರೇಲಿ ಮೂಲದ ಕಂಪನಿ. 'ನಂಬಿಕಸ್ಥ ಸರ್ಕಾರ'ಗಳಿಗೆ ಮಾತ್ರ ಪೆಗಾಸಿಸ್‌ ಸ್ಪೈವೇರ್‌ಅನ್ನು ಮಾರಾಟ ಮಾಡುತ್ತದೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.