ADVERTISEMENT

ಶ್ರೀಲಂಕಾದಲ್ಲಿ ಇಂಧನ ಆಮದಿಗೆ ಖಾಸಗಿ ಕಂಪನಿಗಳಿಗೆ ಅವಕಾಶ

ಪಿಟಿಐ
Published 27 ಮೇ 2022, 13:30 IST
Last Updated 27 ಮೇ 2022, 13:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ: ದೇಶದಲ್ಲಿರುವ ಖಾಸಗಿ ಕಂಪನಿಗಳು ಇಂಧನ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಶ್ರೀಲಂಕಾದ ಇಂಧನ ಸಚಿವ ಕಾಂಚನ ವಿಜೆಸೇಕರ ಹೇಳಿದ್ದಾರೆ.

ಈ ಮೂಲಕ ಸರ್ಕಾರಿ ಸ್ವಾಮ್ಯದ ರಿಟೇಲ್‌ ಇಂಧನ ಸಂಸ್ಥೆ ಸಿಲೊನ್ ಪೆಟ್ರೋಲಿಯಂ ಕಾರ್ಪೊರೇಷನ್(ಸಿಪಿಸಿ) ಮೇಲಿನ ಒತ್ತಡವನ್ನು ತಗ್ಗಿಸುವ ಯತ್ನಕ್ಕೆ ಲಂಕಾ ಸರ್ಕಾರ ಮುಂದಾಗಿದೆ.

ಕೈಗಾರಿಕೆಗಳ ಜನರೇಟರ್‌ಗಳು ಮತ್ತು ಸಾಮಗ್ರಿಗಳ ಕಾರ್ಯ ನಿರ್ವಹಣೆಗೆ ಇಂಧನ ಮತ್ತು ಡೀಸೆಲ್ ಪೂರೈಸಲು ವಿದೇಶಗಳಿಂದ ಇಂಧನ ಆಮದು ಮಾಡಿಕೊಳ್ಳಲು ಖಾಸಗಿ ಇಂಧನ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ.ಇದು ಭಾರಿ ಪ್ರಮಾಣದಲ್ಲಿ ಇಂಧನ ಪೂರೈಸುವ ಇಂಧನ ಕೇಂದ್ರಗಳು ಮತ್ತು ಸಿಪಿಸಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ ಎಂದು ಶುಕ್ರವಾರ ಸಚಿವ ವಿಜೆಸೇಕರ ಅವರು ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.