ADVERTISEMENT

ಶ್ರೀಲಂಕಾದ ಪೆಟ್ರೋಲ್‌ ಬಂಕ್‌ಗಳ ಎದುರು ‘ನೋ ಪೆಟ್ರೋಲ್‌’ ಫಲಕ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2022, 11:18 IST
Last Updated 17 ಮೇ 2022, 11:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊಲಂಬೊ: ಶ್ರೀಲಂಕಾದ ಪೆಟ್ರೋಲ್‌ ಬಂಕ್‌ಗಳ ಎದುರು ಮಂಗಳವಾರ ‘ನೋ ಪೆಟ್ರೋಲ್‌’ (ಪೆಟ್ರೋಲ್‌ ಇಲ್ಲ) ಎಂಬ ಫಲಕಗಳನ್ನು ಹಾಕಲಾಗಿದ್ದು, ವಾಹನಗಳಿಗೆ ಇಂಧನ ಸಿಗದೆ ಗ್ರಾಹಕರು ಪರಿದಾಡುವಂತಾಗಿದೆ.

‘ಇನ್ನೊಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್‌ ದಾಸ್ತಾನು ಮಾತ್ರ ದೇಶದಲ್ಲಿ ಉಳಿದಿದೆ’ ಎಂದು ಶ್ರೀಲಂಕಾದ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರು ಸೋಮವಾರವಷ್ಟೇ ಎಚ್ಚರಿಸಿದ್ದರು. ಅವರು ಎಚ್ಚರಿಕೆ ನೀಡಿದ ಮರುದಿನವೇ ‘ನೋ ಪೆಟ್ರೋಲ್‌’ ಫಲಕಗಳು ಬಂಕ್‌ಗಳ ಎದುರು ನೇತುಬಿದ್ದಿವೆ.

‘ಪೆಟ್ರೋಲ್‌ಗಾಗಿ ಬೆಳಗ್ಗಿನಿಂದ ಕಾಯುತ್ತಿದ್ದೇವೆ. ಆದರೆ ಇನ್ನೂ ಸಿಕ್ಕಿಲ್ಲ. ಜನರುಕಿಲೋಮೀಟರ್‌ ಗಟ್ಟಲೆ ಸಾಲುಗಟ್ಟಿ ನಿಂತಿದ್ದಾರೆ’ ಎಂದು ಸ್ಥಳೀಯರೊಬ್ಬರು ಹೇಳಿರುವುದಾಗಿ ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ADVERTISEMENT

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.