ADVERTISEMENT

ಶ್ರೀಲಂಕಾ: ಹಂಗಾಮಿ ಪ್ರಧಾನಿಯಾಗಿ ರಾಜಪಕ್ಸೆ ಜವಾಬ್ದಾರಿ ನಿರ್ವಹಣೆ

ನ್ಯಾಯಾಲಯದಿಂದ ತಡೆ, ಸಿರಿಸೇನಾಗೆ ಹಿನ್ನಡೆ

ಪಿಟಿಐ
Published 3 ಡಿಸೆಂಬರ್ 2018, 16:56 IST
Last Updated 3 ಡಿಸೆಂಬರ್ 2018, 16:56 IST
ಮಹಿಂದಾ ರಾಜಪಕ್ಸೆ
ಮಹಿಂದಾ ರಾಜಪಕ್ಸೆ   

ಕೊಲಂಬೊ: ಮಹಿಂದಾ ರಾಜಪಕ್ಸೆ ಅವರು ಶ್ರೀಲಂಕಾದ ಹಂಗಾಮಿ ಪ್ರಧಾನಿಯಾಗಿ ಜವಾಬ್ದಾರಿ ನಿರ್ವಹಣೆಗೆ ಶ್ರೀಲಂಕಾ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಈ ಬೆಳವಣಿಗೆಯಿಂದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ತೀವ್ರ ಹಿನ್ನಡೆಯುಂಟಾಗಿದೆ.

‘ರಾಜಪಕ್ಸೆ ಮತ್ತು ಅವರ ಸಚಿವರ ಸಂಪುಟ ಅಧಿಕಾರ ಚಲಾಯಿಸುವಂತಿಲ್ಲ ಎಂದುಮೇಲ್ಮನವಿ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿದೆ’ ಎಂದು ಕೊಲಂಬೊ ಗಜೆಟ್‌ ವರದಿ ಮಾಡಿದೆ.

ಹಿಂದಿನ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ಯಾವ ಆಧಾರದಲ್ಲಿ ವಜಾಗೊಳಿಲಾಗಿದೆ ಎಂದು ಪ್ರಶ್ನಿಸಿ, 122 ಸಂಸದರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ಪ್ರಕಟಿಸಿದೆ.

ADVERTISEMENT

ಅಕ್ಟೋಬರ್‌ 22ರಂದು ಪ್ಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ ಮಹಿಂದಾ ರಾಜಪಕ್ಸೆ ಅವರ ಸ್ಥಾನಕ್ಕೆ ನೇಮಿಸಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಆದೇಶ ಹೊರಡಿಸಿದ್ದರು. ಈ ಬೆಳವಣಿಗೆ ಬಳಿಕ ಶ್ರೀಲಂಕಾ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.