ADVERTISEMENT

ಶ್ರೀಲಂಕಾ: ಉಸ್ತುವಾರಿ ಸಚಿವ ಸಂಪುಟ ರಚನೆ

ಪಿಟಿಐ
Published 22 ನವೆಂಬರ್ 2019, 18:34 IST
Last Updated 22 ನವೆಂಬರ್ 2019, 18:34 IST
   

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರು 16 ಸದಸ್ಯರ ಉಸ್ತುವಾರಿ ಸಚಿವ ಸಂಪುಟ ರಚಿಸಿದ್ದು, ತಮ್ಮ ಇಬ್ಬರು ಸಹೋದರರಿಗೆ ಮಹತ್ವದ ಖಾತೆ ಹಂಚಿಕೆ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಅಧ್ಯಕ್ಷ ಗೋಟಬಯಾ, ಶೀಘ್ರ ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಧಾನಿ ಮಹಿಂದಾ ರಾಜಪಕ್ಸೆ(74) ಅವರಿಗೆ ರಕ್ಷಣೆ ಮತ್ತು ಹಣಕಾಸು ಖಾತೆ ನೀಡಲಾಗಿದೆ. ಸಂಪುಟಕ್ಕೆ ಸೇರ್ಪಡೆಯಾಗಿರುವ ಗೋಟಬಯಾ ಅವರ ಇನ್ನೊಬ್ಬ ಹಿರಿಯ ಸಹೋದರ ಚಮಲ್‌ ರಾಜಪಕ್ಸೆ ಅವರಿಗೆ ವ್ಯಾಪಾರ ಮತ್ತು ಆಹಾರ ಭದ್ರತಾ ಖಾತೆಯ ಜವಾಬ್ದಾರಿ ನೀಡಲಾಗಿದೆ.

ADVERTISEMENT

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರು ತಮಿಳರಿಗೂಸಂಪುಟದಲ್ಲಿ ಸ್ಥಾನ ನೀಡಲಾಗಿದೆ.ಹಿರಿಯ ಮಾರ್ಕ್ಸ್‌ವಾದಿ ದಿನೇಶ್‌ ಗುಣವರ್ಧನ್‌(70) ವಿದೇಶಾಂಗ ವ್ಯವಹಾರಗಳ ಖಾತೆ ನೀಡಲಾಗಿದೆ.

ದೇಶದಲ್ಲಿ ಆಗಸ್ಟ್‌ 2020ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.