ಟೆಗುಸಿಗಲ್ಪ (ಹೊಂಡುರಾಸ್): ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಭಾರಿ ಮಳೆಯಿಂದ ವಿವಿಧೆಡೆ ಗುಡ್ಡ ಕುಸಿತಗಳು ಸಂಭವಿಸಿವೆ. ಇಲ್ಲಿನ ಸ್ಯಾನ್ ಕ್ರಿಸ್ಟೊಬಾಲ್ ವೆರಪಾಜ್ ನಗರದಲ್ಲೂ ಭಾರಿ ಭೂಕುಸಿತವಾಗಿದೆ.
ಮನೆಗಳು ಗುಡ್ಡದಡಿ ಸಿಲುಕಿದ್ದು, 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಮಧ್ಯ ಅಮೆರಿಕದಲ್ಲಿ ಮಳೆಯಿಂದಾಗಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಮಧ್ಯ ಗ್ವಾಟೆಮಾಲಾದಲ್ಲಿಗುಡ್ಡ ಕುಸಿತದಿಂದ 25 ಮನೆಗಳು ನೆಲಸಮವಾಗಿದ್ದು, ಹಲವಾರು ಮಂದಿ ಅವಶೇಷದಡಿ ಸಿಲುಕಿದ್ದಾರೆ ಎಂದು ಅಧ್ಯಕ್ಷ ಅಲ್‌ಜಂಡ್ರೊ ಗಿಯಾಮಟೈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಧ್ಯ ಅಮೆರಿಕದಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಗ್ವಾಟೆಮಾಲದಿಂದ ಪನಾಮಾವರೆಗೂ ಅನೇಕ ಭೂಕುಸಿತಗಳು ಸಂಭವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.