ADVERTISEMENT

ನಾಸಾ: ಖಾಸಗಿ ಬಾಹ್ಯಾಕಾಶ ಯಾನಾಕ್ಕೆ ಸುನಿತಾ ವಿಲಿಯಮ್ಸ್‌ ಆಯ್ಕೆ

ಪಿಟಿಐ
Published 4 ಆಗಸ್ಟ್ 2018, 13:14 IST
Last Updated 4 ಆಗಸ್ಟ್ 2018, 13:14 IST
ಸುನಿತಾ ವಿಲಿಯಮ್ಸ್
ಸುನಿತಾ ವಿಲಿಯಮ್ಸ್   

ಹೂಸ್ಟನ್‌(ಯುಎಸ್‌ಎ) : ಮುಂದಿನ ವರ್ಷ ಆರಂಭವಾಗುವ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಮೊದಲ ವಾಣಿಜ್ಯ ಯಾತ್ರೆಯಲ್ಲಿ ಒಂಬತ್ತು ಗಗನಯಾನಿಗಳ ಪೈಕಿ ಭಾರತ ಮೂಲದ ಸುನಿತಾ ವಿಲಿಯಮ್ಸ್‌ ಕೂಡ ಸ್ಥಾನ ಪಡೆದಿದ್ದಾರೆ.

ಬೋಯಿಂಗ್‌ ಮತ್ತು ಸ್ಪೇಷ್‌ ಎಕ್ಸ್‌ ಜಂಟಿಯಾಗಿ ಅಭಿವೃದ್ಧಿಪಡಿಸಿದ ಹೊಸ ನೌಕೆಯಲ್ಲಿ 9 ಯಾನಿಗಳ ತಂಡ ಅಧಿಕೃತ ಪ್ರವಾಸ ಕೈಗೊಳ್ಳಲಿದೆ ಎಂದು ನಾಸಾ ತಿಳಿಸಿದೆ.

ಲಾಂಚ್‌ ಅಮೆರಿಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ನಾಸಾದ ಆಡಳಿತ ಮುಖ್ಯಸ್ಥ ಜಿಮ್‌ ಬ್ರಿಡೆನ್‌ಸ್ಟೈನ್‌, ‘ಅಮೆರಿಕ ನೆಲದಿಂದ ದೇಶದ ಗಗನಯಾನಿಗಳನ್ನು ಅಮೆರಿಕ ರಾಕೆಟ್‌ ಮೂಲಕ ಕಳುಹಿಸಿಕೊಡುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಸುರಕ್ಷತೆ ಹಾಗೂ ಕಾರ್ಯನಿರ್ವಹಣಾ ಅಗತ್ಯತೆಗಳನ್ನು ಪೂರೈಸಲು ಇತರೆ ಸಹಯೋಗ ಸಂಸ್ಥೆಗಳ ಜೊತೆ ನಾಸಾವು ನೌಕೆಯ ವಿನ್ಯಾಸ, ಅಭಿವೃದ್ಧಿ ಹಾಗೂ ಪರೀಕ್ಷಾ ವಿಧಾನದಲ್ಲಿ ಜತೆಯಾಗಿ ಕೆಲಸ ಮಾಡಿದೆ’ ಎಂದರು.‌

ಸುನಿತಾ ಅವರೊಂದಿಗೆ ನಾಸಾದ ಖಗೋಳವಿಜ್ಞಾನಿಗಳಾದ ರಾಬರ್ಟ್‌ ಬೆಹ್‌ಂಕೇನ್‌, ಡಗ್ಲಸ್‌ ಹರ್ಲೆ, ಏರಿಕಗ್‌ ಬೊಯೆ, ನಿಕೊಲೆ ಮನ್‌, ಬೋಯಿಂಗ್‌ನ ಅಧಿಕಾರಿ ಕ್ರಿಸ್ಟೋಫರ್‌ ಫರ್ಗುಸನ್‌ ಅವರು ಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.