ADVERTISEMENT

ಖಳರಿಗಿಂತ ಸೂಪರ್‌ ಹೀರೊಗಳೇ ಹೆಚ್ಚು ಕ್ರೂರ

ಯುವಜನರ ಮೇಲೆ ಹೆಚ್ಚು ನಕಾರಾತ್ಮಕ ಪ್ರಭಾವ

ಪಿಟಿಐ
Published 4 ನವೆಂಬರ್ 2018, 20:15 IST
Last Updated 4 ನವೆಂಬರ್ 2018, 20:15 IST

ವಾಷಿಂಗ್ಟನ್‌: ಅತಿಮಾನುಷ (ಸೂಪರ್‌ ಹೀರೊ) ಪಾತ್ರಾಧಾರಿತ ಸಿನಿಮಾಗಳಲ್ಲಿ ಖಳನಾಯಕನ ಪಾತ್ರಗಳಿಗಿಂತಲೂ ‘ಒಳ್ಳೆಯ ವ್ಯಕ್ತಿಗಳು’ ಎನಿಸಿಕೊಂಡ ನಾಯಕರ ಪಾತ್ರಗಳಲ್ಲೇ ಹೆಚ್ಚು ಕ್ರೌರ್ಯವಿರುವುದು ಅಧ್ಯಯನದಿಂದ ಕಂಡುಬಂದಿದೆ. ಅಲ್ಲದೆ, ಇಂತಹ ಸೂಪರ್‌ ಹೀರೊಗಳ ಸಿನಿಮಾಗಳು ಯುವಜನರ ಮೇಲೆ ಹೆಚ್ಚು ನಕಾರಾತ್ಮಕ ಪ್ರಭಾವ ಬೀರುತ್ತಿವೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್‌ ಯೂನಿವರ್ಸಿಟಿಯ ಸಂಶೋಧಕರು, 2015 ಮತ್ತು 2016ರ ಅವಧಿಯಲ್ಲಿ ಬಿಡುಗಡೆಯಾದ ಸೂಪರ್‌ಹೀರೊ ಪಾತ್ರಾಧಾರಿತ 10 ಸಿನಿಮಾಗಳ ವಿಶ್ಲೇಷಣೆ ನಡೆಸಿ ಈ ಅಧ್ಯಯನ ವರದಿ ಸಿದ್ಧಪಡಿಸಿದ್ದಾರೆ.

ಈ ಸಿನಿಮಾಗಳಲ್ಲಿ ಚಿತ್ರಿಸಲಾಗಿರುವ ಕ್ರೌರ್ಯದ ಬಗೆಗಳು ಮತ್ತು ನಿರ್ದಿಷ್ಟ ಸನ್ನಿವೇಶಗಳನ್ನು ಕ್ರೋಡೀಕರಿಸಿ, ಮುಖ್ಯ ಪಾತ್ರಗಳನ್ನು ಒಳ್ಳೆಯ ವ್ಯಕ್ತಿ ಅಥವಾ ದುಷ್ಟ ವ್ಯಕ್ತಿ ಎಂದು ವಿಂಗಡಿಸಿ, ಇವು ವೀಕ್ಷಕರ ಮೇಲೆ ಉಂಟು ಮಾಡುವ ಪ್ರಭಾವ ಹಾಗೂ ಸಮಾಜದ ಮೇಲೆ ಬೀರುವ ಪರಿಣಾಮವನ್ನು ಸಂಶೋಧಕರು ಅಂದಾಜಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.