
ಪಿಟಿಐ
ಬಿಷ್ಕೆಕ್: ಕಿರ್ಗಿಸ್ತಾನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಇಲ್ಲಿಗೆ ಬಂದಿದ್ದಾರೆ.
ಕಿರ್ಗಿಸ್ತಾನದ ವಿದೇಶಾಂಗ ಸಚಿವ ಚಿಂಗಿಜ್ ಐದರ್‌ಬೆಕಾವ್ ಅವರ ಜತೆ ಸುಷ್ಮಾ ಅವರು ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಜೂನ್ 13 ಮತ್ತು 14ರಂದು ನಡೆಯಲಿರುವಶಾಂಘೈ ಸಹಕಾರ ಸಂಘದ ಸಭೆಯ ಪೂರ್ವಸಿದ್ಧತೆಗಳ ಪರಿಶೀಲನೆ ಜೊತೆಗೆ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮಹತ್ವದ ವಿಚಾರಗಳ ಕುರಿತು ಬುಧವಾರ ಮಾತುಕತೆನಡೆಯಲಿದೆ. ಸಂಘದ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.