ADVERTISEMENT

ಮಾಡರ್ನಾದ ಕೋವಿಡ್ ಲಸಿಕೆಗೆ ಅನುಮೋದನೆ ನೀಡಿದ ಸ್ವಿಡ್ಜರ್‌ಲೆಂಡ್ ಔಷಧ ನಿಯಂತ್ರಕ

ಪಿಟಿಐ
Published 12 ಜನವರಿ 2021, 13:41 IST
Last Updated 12 ಜನವರಿ 2021, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜುರಿಕ್: ಸ್ವಿಡ್ಜರ್‌ಲೆಂಡ್ ಔಷಧ ನಿಯಂತ್ರಕವು ಮಂಗಳವಾರ ಮಾಡರ್ನಾ ಇಂಕ್‌ನ ಕೋವಿಡ್-19 ಲಸಿಕೆಯನ್ನು ಅಂಗೀಕರಿಸಿದ್ದು, ಹೊಸ ಸ್ವರೂಪದ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಎರಡನೇ ಲಸಿಕೆಯು ಸೇರಿದಂತಾಗಿದೆ.

'ಸುರಕ್ಷತೆ, ಪರಿಣಾಮ ಮತ್ತು ಗುಣಮಟ್ಟ ಕುರಿತು ಸಲ್ಲಿಸಿದ ಎಲ್ಲ ದತ್ತಾಂಶಗಳ ಕೂಲಂಕಷ ಪರಿಶೀಲನೆಯ ಬಳಿಕ ಸ್ವಿಸ್‌ಮೆಡಿಕ್, ಎಮಾಡರ್ನಾ ಲಸಿಕೆಯನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ತಾತ್ಕಾಲಿಕವಾಗಿ ಬಳಸಲು ಇಂದು ಅಧಿಕೃತಗೊಳಿಸಿದೆ' ಎಂದು ಔಷಧ ನಿಯಂತ್ರಕ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಸ್ವಿಸ್‌ಮೆಡಿಕ್ ಈಗಾಗಲೇ ಫೈಜರ್ ಮತ್ತು ಬಯೊಎನ್‌ಟೆಕ್‌ ಲಸಿಕೆಗಳಿಗೂ ಅನುಮೋದನೆ ನೀಡಿದೆ.

ADVERTISEMENT

ವೈರಸ್‌ನ ಹೊಸ ಸ್ವರೂಪದ ವಿರುದ್ಧವೂ ಮಾಡರ್ನಾ ಲಸಿಕೆ ಪ್ರತಿಕಾಯಗಳನ್ನು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಮುಂದಿನ ವಾರಗಳಲ್ಲಿ ಮತ್ತಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿತ್ತು.

ಈಗಾಗಲೇ ಅಭಿವೃದ್ಧಿಪಡಿಸಿರುವ ಫೈಜರ್ ಲಸಿಕೆಯು ಬ್ರಿಟನ್‌ನಲ್ಲಿ ಕಂಡುಬಂದಿರುವ ವೈರಸ್‌ನ ಹೊಸ ಸ್ವರೂಪವನ್ನೂ ನಿಷ್ಕ್ರಿಯಗೊಳಿಸಬಹುದು. ಈಗಾಗಲೇ ಲಸಿಕೆ ಹಾಕಿಸಿಕೊಂಡಿರುವವರ ರಕ್ತದ ಮಾದರಿಗಳ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಫೈಜರ್ ತಿಳಿಸಿರುವುದಾಗಿ ‘ಸಿಎನ್‌ಎನ್‌’ ವರದಿ ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.