ADVERTISEMENT

ಅಫ್ಗಾನ್ ಬಿಕ್ಕಟ್ಟಿನಿಂದಾಗಿ ಆರೋಗ್ಯ ರಕ್ಷಣೆಯ ಅಗತ್ಯ ಹೆಚ್ಚಳ: ಡಬ್ಲ್ಯುಎಚ್‌ಒ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2021, 4:09 IST
Last Updated 22 ಆಗಸ್ಟ್ 2021, 4:09 IST
ಅಫ್ಗಾನಿಸ್ತಾನದಲ್ಲಿನ ವಿಮಾನ ನಿಲ್ದಾಣದ ದೃಶ್ಯ
ಅಫ್ಗಾನಿಸ್ತಾನದಲ್ಲಿನ ವಿಮಾನ ನಿಲ್ದಾಣದ ದೃಶ್ಯ   

ಜಿನಿವಾ (ಸ್ವಿಟ್ಜರ್‌ಲೆಂಡ್): ಅಫ್ಗಾನಿಸ್ತಾನದಲ್ಲಿನ ಸಂಘರ್ಷವು ಅಸಂಖ್ಯಾತ ಜನರನ್ನು ಹಸಿವು ಮತ್ತು ಅನಾರೋಗ್ಯಕ್ಕೀಡು ಮಾಡತ್ತಿದೆ ಎಂದು ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ), ಆರೋಗ್ಯ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಅಫ್ಗಾನ್‌ನಮೂರನೇ ಒಂದರಷ್ಟು ಜನಸಂಖ್ಯೆಯು ಹಸಿವು ಮತ್ತುಐದು ವರ್ಷಕ್ಕಿಂತ ಕೆಳಗಿರುವ ಅರ್ಧಕ್ಕಿಂತಲೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವಾಯ್ಸ್‌ ಆಫ್‌ ಅಮೆರಿಕ ವರದಿ ಮಾಡಿದೆ. ಈ ಸಂಸ್ಥೆಯ ಮಾಹಿತಿ ಪ್ರಕಾರ, ಸದ್ಯದ ಬಿಕ್ಕಟ್ಟು ಅಫ್ಗಾನ್‌ನಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ʼಆರೋಗ್ಯ ಸೇವೆಗಳುಯಾವುದೇ ಅಡೆತಡೆಯಿಲ್ಲದೆ ದೇಶದಾದ್ಯಂತ ಮುಂದುವರಿಯಬೇಕು. ಸ್ತ್ರೀಯರಿಗೆ ಮಹಿಳಾ ಆರೋಗ್ಯ ಕಾರ್ಯಕರ್ತರ ಲಭ್ಯತೆಯನ್ನು ಖಚಿತಪಡಿಸುವತ್ತ ಗಮನಹರಿಸಬೇಕು. ಇವು ಪ್ರಾಂತೀಯ ಕ್ಷೇತ್ರ ಮೇಲ್ವಿಚಾರಣೆಯನ್ನು ಅವಲಂಬಿಸಿವೆ. ಮಹಿಳಾ ಸಿಬ್ಬಂದಿ ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಕರ್ತವ್ಯಕ್ಕೆ ಮರಳುವಂತೆ ಕರೆ ನೀಡಲಾಗಿದೆʼ ಎಂದು ಡಬ್ಲ್ಯುಎಚ್‌ಒ ವಕ್ತಾರ ತಾರಿಕ್‌ ಜಸರೆವಿಕ್ ಹೇಳಿದ್ದಾರೆ.

ADVERTISEMENT

ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯುಎನ್‌ಎಚ್‌ಸಿಆರ್ (ವಿಶ್ವಸಂಸ್ಥೆಯ ನಿರಾಶ್ರಿತರ ಹೈ-ಕಮಿಷನ್‌), ಅಫ್ಗಾನಿಸ್ತಾನದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅಲ್ಲಿನವಾಸ್ತವ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಪ್ರಕಟಿಸಿದೆ. ಹಾಗೆಯೇ, ಅಫ್ಗಾನಿಸ್ತಾನದಲ್ಲಿನ ಆಂತರಿಕ ಸುಧಾರಣೆಗಾಗಿಜನರಿಗೆ ಮಾನವೀಯ ನೆರವು ನೀಡುವುದು ಅಗತ್ಯವಾಗಿದೆ. ನಿಯಮಿತ ಮಾರ್ಗಗಳ ಮೂಲಕ ದೇಶ ತೊರೆಯಲು ಹೆಚ್ಚಿನವರಿಗೆ ಸಾಧ್ಯವಾಗುತ್ತಿಲ್ಲ. ಕೆಲವು ದಿನಗಳ ಹಿಂದೆ ವಿಮಾನ ನಿಲ್ದಾಣಗಳಲ್ಲಿ ತೆಗೆದಿರುವ ಚಿತ್ರಗಳು ಜಗತ್ತನ್ನು ಬೆಚ್ಚಿ ಬೀಳಿಸಿವೆ. ಅಫ್ಗಾನ್‌ ಜನರಲ್ಲಿ ಭಯ ಮತ್ತು ಅನಿಶ್ಚಿತತೆಯ ಭಾವ ಮೂಡಿರುವುದನ್ನು ಅವು ಗಟ್ಟಿಯಾಗಿ ಹೇಳುತ್ತಿವೆಎಂದೂ ತಿಳಿಸಿದೆ.

ತಾಲಿಬಾನ್‌ ಸಂಘಟನೆಅಫ್ಗಾನಿಸ್ತಾನದಲ್ಲಿ ಹಿಡಿತ ಸಾಧಿಸುತ್ತಿದ್ದಂತೆಯೇ, ಅಧ್ಯಕ್ಷ ಅಶ್ರಫ್‌ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ತಾಲಿಬಾನ್‌ ಆಡಳಿತದ ಬಗ್ಗೆ ಜನರಲ್ಲಿ ಆತಂಕ ಮೂಡಿದ್ದು, ದೇಶ ತೊರೆಯಲು ವಿಮಾನ ನಿಲ್ದಾಣಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.