ADVERTISEMENT

ಅಫ್ಗಾನಿಸ್ತಾನ: ಮಾನವ ಹಕ್ಕುಗಳ ಆಯೋಗವನ್ನೇ ರದ್ದು ಮಾಡಿದ ತಾಲಿಬಾನ್!

ತಾಲಿಬಾನ್‌ ಸರ್ಕಾರದಿಂದ ಮತ್ತಷ್ಟು ಕಠಿಣ ಆಡಳಿತ

ಏಜೆನ್ಸೀಸ್
Published 17 ಮೇ 2022, 14:08 IST
Last Updated 17 ಮೇ 2022, 14:08 IST
ಸಾಂದರ್ಭಿಕ ಚಿತ್ರ –ಎಎಫ್‌ಪಿ
ಸಾಂದರ್ಭಿಕ ಚಿತ್ರ –ಎಎಫ್‌ಪಿ   

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ ಅಗತ್ಯವಿಲ್ಲ ಎಂದು ಪರಿಗಣಿಸಿ ಅದನ್ನು ರದ್ದು ಮಾಡಲಾಗಿದೆ ಎಂದು ತಾಲಿಬಾನ್‌ ಆಡಳಿತದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಇತರೆ ಸಂಘ ಸಂಸ್ಥೆಗಳಿವೆ. ಅವು ನ್ಯಾಯಾಂಗದೊಂದಿಗೆ ಸಂಪರ್ಕ ಹೊಂದಿವೆ. ಹಾಗಾಗಿಸದ್ಯಕ್ಕೆ ದೇಶದಲ್ಲಿ ಮಾನವ ಹಕ್ಕುಗಳ ಆಯೋಗದ ಅಗತ್ಯ ಇಲ್ಲ. ಭವಿಷ್ಯದಲ್ಲಿ ಇದರ ಅಗತ್ಯ ಎದುರಾದರೆ ಮತ್ತೆ ಕಾರ್ಯಾರಂಭಿಸಲಿದೆ’ಎಂದು ಸರ್ಕಾರದ ಉಪ ವಕ್ತಾರ ಇನಾಮುಲ್ಲಾ ಸಮಂಗನಿ ತಿಳಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿಪ್ರಜಾಪ್ರಭುತ್ವ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರದ ಚುಕ್ಕಾಣಿ ಹಿಡಿದ ತಾಲಿಬಾನ್‌, ಚುನಾವಣಾ ಆಯೋಗ ಮತ್ತು ಮಹಿಳಾ ಸಚಿವಾಲಯ ಸೇರಿದಂತೆ ಅಫ್ಗನ್ನರ ಸ್ವಾತಂತ್ರ್ಯವನ್ನು ರಕ್ಷಿಸುತ್ತಿದ್ದ ಹಲವು ಸಂಸ್ಥೆಗಳನ್ನು ರದ್ದು ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.