
ಢಾಕಾ : ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಸೆಗುನ್‌ಬಾಗೀಚಾದಲ್ಲಿರುವ ಢಾಕಾ ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಾಮಪತ್ರ ಸಲ್ಲಿಸಲಾಯಿತು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಫೆ. 12ರಂದು ನಡೆಯಲಿರುವ ಚುನಾವಣೆಗೆ ರೆಹಮಾನ್ ಅವರು ಢಾಕಾ–17 ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 13ನೇ ರಾಷ್ಟ್ರೀಯ ಸಂಸತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಸೋಮವಾರ ಅಂತಿಮ ದಿನವಾಗಿತ್ತು.
ಬಿಎನ್‌ಪಿ ಅಧ್ಯಕ್ಷರ ಸಲಹೆಗಾರ ಅಬ್ದುಸ್ ಸಲಾಮ್ ಅವರು ಬಾಂಗ್ಲಾದೇಶ ವೈದ್ಯರ ಸಂಘದ (ಡಿಎಬಿ) ಮುಖ್ಯ ಸಲಹೆಗಾರ ಪ್ರೊ. ಡಾ. ಫರ್ಹಾದ್ ಹಲೀಮ್ ಡೊನಾರ್ ಅವರೊಂದಿಗೆ ರೆಹಮಾನ್ ಪರವಾಗಿ ನಾಮಪತ್ರ ಸಲ್ಲಿಸಿದರು.
ವಾರದ ಹಿಂದಷ್ಟೇ ಲಂಡನ್‌ನಿಂದ ತಾಯ್ನಾಡಿಗೆ ಮರಳಿದ್ದ ರೆಹಮಾನ್ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗವು ಅನುಮೋದನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.