ADVERTISEMENT

ಜಾರ್ಜ್‌ಫ್ಲಾಯ್ಡ್‌ ಹತ್ಯೆ ಚಿತ್ರೀಕರಿಸಿದ್ದ ಯುವತಿಗೆ ಪುಲಿಟ್ಜರ್‌ನ ಪ್ರಶಂಸಾಪತ್ರ

ವಿಶ್ವದಾದ್ಯಂತ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟಕ್ಕೆ ಪ್ರೇರೇಪಣೆ ಪ್ರಕರಣ

ಏಜೆನ್ಸೀಸ್
Published 12 ಜೂನ್ 2021, 7:30 IST
Last Updated 12 ಜೂನ್ 2021, 7:30 IST
ಮಿನ್ನೆಪೊಲಿಸ್‌ ಪೊಲೀಸ್ ಅಧಿಕಾರಿಯೊಬ್ಬರು ಅಮೆರಿಕದ ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ್‌ ಅವರನ್ನು ಬಂಧಿಸಿ,  ಹತ್ಯೆ ಮಾಡುವುದನ್ನು ತನ್ನ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಮಾಡಿದ ಡಾರ್ನೆಲ್ಲಾ ಫ್ರಝಿಯರ್‌ (ಬಲದಿಂದ ಮೂರನೆಯವರು). ಈಕೆಯನ್ನು ಪುಲಿಟ್ಜರ್‌ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಮಿನ್ನೆಪೊಲಿಸ್‌ ಪೊಲೀಸ್ ಅಧಿಕಾರಿಯೊಬ್ಬರು ಅಮೆರಿಕದ ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ್‌ ಅವರನ್ನು ಬಂಧಿಸಿ,  ಹತ್ಯೆ ಮಾಡುವುದನ್ನು ತನ್ನ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಮಾಡಿದ ಡಾರ್ನೆಲ್ಲಾ ಫ್ರಝಿಯರ್‌ (ಬಲದಿಂದ ಮೂರನೆಯವರು). ಈಕೆಯನ್ನು ಪುಲಿಟ್ಜರ್‌ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.   

ಮಿನ್ನೆಪೊಲಿಸ್‌, ಅಮೆರಿಕ: ‘ಮಿನ್ನೆಪೊಲಿಸ್‌ನ ಪೊಲೀಸ್ ಅಧಿಕಾರಿಯೊಬ್ಬರು ಕಪ್ಪುವರ್ಣೀಯ ಅಮೆರಿಕನ್‌ ಜಾರ್ಜ್‌ ಫ್ಲಾಯ್ಡ್‌ ಕುತ್ತಿಗೆ ಮೇಲೆ ಮೊಣಕಾಲಿಟ್ಟು ಹೊಸಕುವುದನ್ನು ತನ್ನ ಮೊಬೈಲ್‌ ಫೋನ್‌ನಲ್ಲಿ ವಿಡಿಯೊ ಮಾಡಿದ್ದ ಯುವತಿ ಡಾರ್ನೆಲ್ಲಾ ಫ್ರೇಜಿಯರ್ ಅವರಿಗೆ ‘ಪುಲಿಟ್ಜರ್‌ ಪ್ರಶಸ್ತಿ’ ನೀಡುವ ಸಂಸ್ಥೆಯು ಪ್ರಶಂಸಾಪತ್ರ ನೀಡಿ ಗೌರವಿಸಿದೆ.

ಫ್ರೇಜಿಯರ್ ಮಾಡಿದ ಈ ವಿಡಿಯೊದಿಂದ ಜನಾಂಗೀಯ ತಾರತಮ್ಯದ ವಿರುದ್ಧ ಜಾಗತಿಕ ಹೋರಾಟಕ್ಕೆ ಪ್ರೇರೇಪಣೆ ಸಿಕ್ಕಿತು ಎಂದು ಈ ಪ್ರಶಂಸಾಪತ್ರ ನೀಡಿರುವ ಪುಲಿಟ್ಜರ್‌ ಮಂಡಳಿ ಹೇಳಿದೆ.

ಕಳೆದ ವರ್ಷ ಮೇ 25ರಂದು 46 ವರ್ಷದ ಅಮೆರಿಕದ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್‌ ಫ್ಲಾಯ್ಡ್ ಹತ್ಯೆ ನಡೆಯಿತು. ಈ ಘಟನೆಯ ವಿಡಿಯೊ ಚಿತ್ರೀಕರಣ ಮಾಡಿದ ಡಾರ್ನಿಯರ್ ಫ್ರೇಜಿಯರ್‌ಗೆ ಆಗ 17 ವರ್ಷ.

ADVERTISEMENT

‘ಡಾರ್ನೆಲ್ಲಾ ಫ್ರೇಜಿಯರ್, ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಧೈರ್ಯದಿಂದ ದಾಖಲಿಸಿದ್ದು, ಇದು ವಿಶ್ವದಾದ್ಯಂತ ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಹಾಗೆಯೇ ಸತ್ಯ ಮತ್ತು ನ್ಯಾಯಕ್ಕಾಗಿ ಕೆಲಸ ಮಾಡುವಲ್ಲಿ ನಾಗರಿಕರ ನಿರ್ಣಾಯಕ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ‘ ಎಂದು ಪುಲಿಟ್ಜರ್ ಪ್ರಶಸ್ತಿ ನೀಡುವ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.