ADVERTISEMENT

ಇಸ್ರೇಲ್‌ ದಾಳಿ: ಹಮಾಸ್‌ ನಾಯಕನ ಮೂರು ಮಕ್ಕಳು ಸಾವು

ಏಜೆನ್ಸೀಸ್
Published 11 ಏಪ್ರಿಲ್ 2024, 12:45 IST
Last Updated 11 ಏಪ್ರಿಲ್ 2024, 12:45 IST
.
.   

ಜೆರುಸಲೇಂ: ಗಾಜಾದ ಮೇಲೆ ವಾಯು ದಾಳಿ ನಡೆಸಿರುವ ಇಸ್ರೇಲ್‌ ಪಡೆಗಳು, ಹಮಾಸ್‌ ಬಂಡುಕೋರರ ನಾಯಕ ಇಸ್ಮಾಯಿಲ್‌ ಹನಿಯೆಹ್‌ ಅವರ ಮೂವರು ಮಕ್ಕಳನ್ನು ಹತ್ಯೆ ಮಾಡಿವೆ.

ಈ ಮಾಹಿತಿಯನ್ನು ಹಮಾಸ್‌ ಗುಂಪಿನ ಅಧಿಕೃತ ಮಾಧ್ಯಮ ಖಚಿತಪಡಿಸಿದ್ದು, ‘ತಮ್ಮ ಮಕ್ಕಳನ್ನು ಹತ್ಯೆ ಮಾಡಿದ ಇಸ್ರೇಲ್‌ ಸೇನೆ ವಿರುದ್ಧ ಇಸ್ಮಾಯಿಲ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದೆ.

ಅಲ್ಲದೇ, ‘ಇಸ್ಮಾಯಿಲ್‌ ಅವರ ನಾಲ್ವರು ಮೊಮ್ಮಕ್ಕಳನ್ನೂ ಇಸ್ರೇಲ್‌ ಪಡೆಗಳು ಹತ್ಯೆ ಮಾಡಿವೆ’ ಎಂದೂ ಅದು ಹೇಳಿದೆ.

ADVERTISEMENT

ಕೇಂದ್ರ ಗಾಜಾ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡಿರುವ ಇಸ್ರೇಲ್‌ ಸೇನೆ, ಬೇರೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

‘ನನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಹತ್ಯೆಯು ಹಮಾಸ್‌ –ಇಸ್ರೇಲ್‌ ಮಧ್ಯೆ ನಡೆಯುತ್ತಿರುವ ಕದನ ವಿರಾಮ ಮಾತುಕತೆಗಳನ್ನು ಮತ್ತಷ್ಟು ಮೃದುಗೊಳಿಸುವ ಒತ್ತಡ ಹೇರುವುದಿಲ್ಲ’ ಎಂದು ಅಲ್‌ ಜಜೀರಾ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಇಸ್ಮಾಯಿಲ್‌ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.