ADVERTISEMENT

ಉಕ್ರೇನ್‌ ಮೇಲಿನ ರಷ್ಯಾ ದಾಳಿ: ಥಾಯ್ಲೆಂಡ್‌ನಲ್ಲಿ ಸಿಲುಕಿದ ಸಾವಿರಾರು ರಷ್ಯನ್ನರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 14:24 IST
Last Updated 13 ಮಾರ್ಚ್ 2022, 14:24 IST
ಥೈಲ್ಯಾಂಡ್‌ ಬಿಚ್‌ನಲ್ಲಿ ರಷ್ಯನ್‌ ಪ್ರವಾಸಿಗರು.
ಥೈಲ್ಯಾಂಡ್‌ ಬಿಚ್‌ನಲ್ಲಿ ರಷ್ಯನ್‌ ಪ್ರವಾಸಿಗರು.   

ಬ್ಯಾಂಕಾಕ್‌: ಉಕ್ರೇನ್‌ ಮೇಲಿನ ರಷ್ಯಾ ದಾಳಿ ಖಂಡಿಸಿ ಅದರ ಮೇಲೆ ಹಲವು ದೇಶಗಳು ವಿಧಿಸಲಾಗಿರುವ ನಿರ್ಬಂಧದಿಂದ ಸಾವಿರಾರು ರಷ್ಯನ್‌ ಪ್ರವಾಸಿಗರು ತಮ್ಮ ತವರಿಗೆ ಮರಳಲಾಗದೆ ಥಾಯ್ಲೆಂಡ್‌ನಲ್ಲಿ ಸಿಲುಕಿಕೊಂಡಿದ್ದಾರೆಎಂದು ಇಲ್ಲಿನ ಥಾಯ್‌ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ರಷ್ಯಾದ ಬ್ಯಾಂಕ್‌ಗಳು, ವ್ಯವಹಾರ ಮತ್ತು ಜಾಗತಿಕ ಪಾವತಿ ಮೇಲೆ ಹಲವು ರಾಷ್ಟ್ರಗಳು ನಿರ್ಬಂಧ ಹೇರಿವೆ. ಇದರಿಂದ ಥಾಯ್ಲೆಂಡ್‌ನಲ್ಲಿ ಸಿಲುಕಿರುವ ರಷ್ಯಾದ ಪ್ರವಾಸಿಗರು ಖರ್ಚಿಗೂ ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ.

ಸಾಂಕ್ರಾಮಿಕ ನಿರ್ಬಂಧಗಳ ಸಡಿಲಿಕೆ ಬಳಿಕ ರಷ್ಯಾದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೀಚ್‌ ಸಮೀಪ ಇರುವ ರೆಸಾರ್ಟ್‌ಗಳಲ್ಲಿ ಉಳಿದುಕೊಂಡಿದ್ದರು. ಈಗ ಹಿಂತಿರುಗಲು ಟಿಕೆಟ್‌ ಪಡೆಯಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ನಿರ್ಬಂಧವೂ ಪ್ರವಾಸಿಗರಿಗೆ ಹೊಡೆತ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.