ADVERTISEMENT

ಅಕ್ರಮ ಹಣ ವರ್ಗಾವಣೆ: ಸಿಂಗಪುರದಲ್ಲಿ ಭಾರತದ ಮೂವರು ವಿದ್ಯಾರ್ಥಿಗಳಿಗೆ ಜೈಲು

ಪಿಟಿಐ
Published 6 ಜನವರಿ 2022, 10:59 IST
Last Updated 6 ಜನವರಿ 2022, 10:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಿಂಗಪುರ: ಅಂತರರಾಷ್ಟ್ರೀಯ ಬ್ಯಾಂಕ್‌ಗಳಿಂದ ಅಕ್ರಮವಾಗಿ ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಕ್ಕಾಗಿ ಭಾರತದ ಮೂವರು ವಿದ್ಯಾರ್ಥಿಗಳನ್ನು ಇಲ್ಲಿ ಜೈಲಿಗೆ ಹಾಕಲಾಗಿದೆ.

ಅಧ್ಯಯನಕ್ಕಾಗಿ ಈ ಮೂವರು ವಿದ್ಯಾರ್ಥಿಗಳು ಸಿಂಗಪುರಕ್ಕೆ ಬಂದಿದ್ದರು. ತಂತ್ರಜ್ಞಾನದ ದುರ್ಬಳಕೆ ಮೂಲಕ ಅಂತರರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದರಿಂದ ವಿದ್ಯಾರ್ಥಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ನಂದಿ ನೀಲಾದ್ರಿ (24) ಎಂಬ ವಿದ್ಯಾರ್ಥಿಗೆ 18 ತಿಂಗಳು, ಆಕಾಶದೀಪ್ ಸಿಂಗ್‌ಗೆ (23) ಒಂದು ವರ್ಷ ಹಾಗೂ ಗಿರಿ ದೇವಜಿತ್‌ಗೆ (24) ಏಳು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ‘ಸ್ಟ್ರೇಟ್ಸ್‌ ಟೈಮ್ಸ್‌’ ದೈನಿಕ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.