ADVERTISEMENT

ತಾಯಿ ಮೊಬೈಲ್‌ನಿಂದ ₹1.44 ಲಕ್ಷ ಮೌಲ್ಯದ ಪಿಠೋಪಕರಣ ಆರ್ಡರ್ ಮಾಡಿದ 22 ತಿಂಗಳ ಮಗು!

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 9:43 IST
Last Updated 24 ಜನವರಿ 2022, 9:43 IST
ವಾಲ್‌ಮಾರ್ಟ್‌
ವಾಲ್‌ಮಾರ್ಟ್‌   

ನ್ಯೂಜೆರ್ಸಿ: 22 ತಿಂಗಳ ಮಗುವೊಂದು ತನ್ನ ತಾಯಿಯ ಮೊಬೈಲ್‌ನಿಂದ ಸುಮಾರು ₹1.44 ಲಕ್ಷ ಮೌಲ್ಯದಪಿಠೋಪಕರಣಗಳನ್ನು ಆನ್‌ಲೈನ್‌ ಆರ್ಡರ್ ಮಾಡಿರುವ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿರುವುದು ವರದಿಯಾಗಿದೆ.

ಆಯನ್‌ಕುಮಾರ್ ಎನ್ನುವ ಮಗುವೊಂದು ವಾಲ್‌ಮಾರ್ಟ್‌ ವೆಬ್‌ಸೈಟ್‌ನಿಂದಪಿಠೋಪಕರಣಗಳನ್ನು ಆರ್ಡರ್ ಮಾಡಿದೆ.

ತನ್ನ ತಾಯಿ ಬಳಿ ಇದ್ದ ಮೊಬೈಲ್ ತೆಗೆದುಕೊಂಡು ಈ ರೀತಿಯಾಗಿ ಮಗು ಮಾಡಿರುವುದು ಆಕಸ್ಮಿಕವಾಗಿ ನಡೆದಿದೆ. ಪಿಠೋಪಕರಣಗಳು ಮನೆಗೆ ಡೆಲಿವರಿ ಬಂದ ಮೇಲೆಯೇಇದು ತಮಗೆ ಗೊತ್ತಾಗಿದ್ದು ಎಂದು ಮಗುವಿನ ತಾಯಿ ಮಧು ಹೇಳಿದ್ದಾರೆ.

ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಮಗುವಿನ ತಂದೆ ಪ್ರಮೋದ್ ಕುಮಾರ್ ಹೇಳಿರುವುದಾಗಿ ಎನ್‌ಬಿಸಿ ವಾಹಿನಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.