ADVERTISEMENT

ದ. ಕೊರಿಯಾ | ಲ್ಯಾಂಡಿಂಗ್ ವೇಳೆ ಅಪಘಾತ; ಹೊತ್ತಿ ಉರಿದ ವಿಮಾನದ ಭೀಕರ ಚಿತ್ರಗಳು..

ಏಜೆನ್ಸೀಸ್
Published 29 ಡಿಸೆಂಬರ್ 2024, 4:54 IST
Last Updated 29 ಡಿಸೆಂಬರ್ 2024, 4:54 IST
<div class="paragraphs"><p>ದಕ್ಷಿಣ ಕೊರಿಯಾದ ಮುಯಾನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಟಿ.ವಿ. ಪರದೆಯಲ್ಲಿ ವಿಮಾನ ದುರಂತದ ಸುದ್ದಿ ವೀಕ್ಷಿಸುತ್ತಿರುವ ಮಹಿಳೆ</p></div>

ದಕ್ಷಿಣ ಕೊರಿಯಾದ ಮುಯಾನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಟಿ.ವಿ. ಪರದೆಯಲ್ಲಿ ವಿಮಾನ ದುರಂತದ ಸುದ್ದಿ ವೀಕ್ಷಿಸುತ್ತಿರುವ ಮಹಿಳೆ

   

ಸಿಯೊಲ್‌: ದಕ್ಷಿಣ ಕೊರಿಯಾದ ಮುಯಾನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಬೇಕಿದ್ದ 'ಜೆಜು ಏರ್‌' ವಿಮಾನಯಾನ ಸಂಸ್ಥೆಯ ವಿಮಾನ, ರನ್‌ವೇನಿಂದ ಜಾರಿ ಗೋಡೆಗೆ ಡಿಕ್ಕಿಯಾಗಿದೆ.

ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಿಂದ ಬಂದ ಈ ವಿಮಾನದಲ್ಲಿ, 6 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 181 ಮಂದಿ ಇದ್ದರು ಎನ್ನಲಾಗಿದೆ. ಇಬ್ಬರನ್ನು ರಕ್ಷಿಸಲಾಗಿದೆ. ಉಳಿದ ಎಲ್ಲರೂ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ADVERTISEMENT

ರನ್‌ವೇಗೆ ಇಳಿದ ವಿಮಾನ

ರನ್‌ವೇಯಿಂದ ಜಾರಿದ ವಿಮಾನ ವೇಗವಾಗಿ ಮುನ್ನುಗ್ಗಿದ್ದು...

ಗೋಡೆಗೆ ಡಿಕ್ಕಿಯಾದ ಕ್ಷಣ

ಗೋಡೆಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಹೊತ್ತಿ ಉರಿದ ವಿಮಾನ

ವಿಮಾನದ ಅವಶೇಷಗಳು ಬೆಂಕಿಗೆ ಆಹುತಿಯಾಗಿರುವುದು

ದುರಂತದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ

ಸುಟ್ಟು ಕರುಕಲಾಗಿರುವ ವಿಮಾನ

ಅವಶೇಷಗಳ ನಡುವೆ ರಕ್ಷಣಾ ಕಾರ್ಯಾಚರಣೆ

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ರಕ್ಷಣಾ ಸಿಬ್ಬಂದಿ

ವಿಮಾನ ನಿಲ್ದಾಣದಲ್ಲಿರುವ ಪರದೆಯಲ್ಲಿ ದುರಂತದ ಸುದ್ದಿಯನ್ನು ವೀಕ್ಷಿಸುತ್ತಿರುವ ಪ್ರಯಾಣಿಕರು

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸಿಬ್ಬಂದಿ ಹೊರತಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.