ADVERTISEMENT

ಅಮೆರಿಕದ 10 ರಾಜ್ಯಗಳ 17 ವಲಸೆ ನ್ಯಾಯಾಲಯಗಳ ನ್ಯಾಯಾಧೀಶರ ವಜಾ

ಪಿಟಿಐ
Published 16 ಜುಲೈ 2025, 3:07 IST
Last Updated 16 ಜುಲೈ 2025, 3:07 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್: ಅಮೆರಿಕದ ಟ್ರಂಪ್ ಆಡಳಿತವು ಹದಿನೇಳು ವಲಸೆ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸಿದೆ. ದೇಶದಲ್ಲಿ ಅಕ್ರಮ ವಲಸಿಗರ ಸಾಮೂಹಿಕ ಗಡೀಪಾರು ಪ್ರಕ್ರಿಯೆ ಚುರುಕುಗೊಂಡ ಬೆನ್ನಲ್ಲೇ ಟ್ರಂಪ್ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ.

ADVERTISEMENT

ಶುಕ್ರವಾರ 15 ನ್ಯಾಯಾಧೀಶರನ್ನು ಕಾರಣವಿಲ್ಲದೆ ಮತ್ತು ಸೋಮವಾರ ಇನ್ನಿಬ್ಬರನ್ನು ಕಾರಣವಿಲ್ಲದೆ ವಜಾಗೊಳಿಸಲಾಗಿದೆ ಎಂದು ನ್ಯಾಯಾಧೀಶರು ಮತ್ತು ಇತರ ವೃತ್ತಿಪರರನ್ನು ಪ್ರತಿನಿಧಿಸುವ ಅಂತರರಾಷ್ಟ್ರೀಯ ವೃತ್ತಿಪರ ಮತ್ತು ತಾಂತ್ರಿಕ ಎಂಜಿನಿಯರ್‌ಗಳ ಒಕ್ಕೂಟವು ಪ್ರಕಟಣೆಯಲ್ಲಿ ತಿಳಿಸಿದೆ. ಕ್ಯಾಲಿಫೋರ್ನಿಯಾ, ಇಲಿನಾಯ್ಸ್, ಲೂಸಿಯಾನ, ಮೇರಿಲ್ಯಾಂಡ್, ಮೆಸಾಚೂಸೆಟ್ಸ್, ನ್ಯೂಯಾರ್ಕ್, ಓಹಿಯೊ, ಟೆಕ್ಸಾಸ್, ಉತಾಹ್ ಮತ್ತು ವರ್ಜೀನಿಯಾ ರಾಜ್ಯಗಳ ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ನ್ಯಾಯಾಧೀಶರನ್ನು ವಜಾಗೊಳಿಸಲಾಗಿದೆ ಎಂದು ಒಕ್ಕೂಟ ಹೇಳಿದೆ.

800 ವಲಸೆ ನ್ಯಾಯಾಧೀಶರಿಗೆ ಸಂಸತ್ತು ಅಧಿಕಾರ ನೀಡಿದ್ದರೂ, ವಲಸೆ ನ್ಯಾಯಾಧೀಶರನ್ನು ಕಾರಣವಿಲ್ಲದೆ ವಜಾಗೊಳಿಸಲಾಗುತ್ತಿದೆ. ಇದು ಅತಿರೇಕದ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಮ್ಯಾಟ್ ಬಿಗ್ಸ್ ಹೇಳಿದ್ದಾರೆ.

ಅಮೆರಿಕವು ಅಕ್ರಮ ವಲಸಿಗರ ಗಡೀಪಾರನ್ನು ಚುರುಕುಗೊಳಿಸಿದ್ದು, ಮೇನಿಂದ ಭಾರಿ ಸಂಖ್ಯೆಯ ಅಕ್ರಮ ವಲಸಿಗರನ್ನು ಬಂಧಿಸುವ ಪ್ರಕ್ರಿಯೆ ಆರಂಭಿಸಿದೆ.

ಇದೀಗ, ವಲಸೆ ನ್ಯಾಯಾಲಯಗಳ ನ್ಯಾಯಾಧೀಶರನ್ನು ವಜಾಗೊಳಿಸಿರುವುದು ನ್ಯಾಯಾಲಯದ ಮೊರೆ ಹೋಗುತ್ತಿದ್ದ ಅಕ್ರಮ ವಲಸಿಗರಿಗೆ ಆತಂಕವನ್ನು ಉಂಟು ಮಾಡಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.