ADVERTISEMENT

ಅಸಹಜ, ಸಮಸ್ಯಾತ್ಮಕ: ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಆಯ್ಕೆಗೆ ಟ್ರಂಪ್ ಟೀಕೆ

ಪಿಟಿಐ
Published 13 ಆಗಸ್ಟ್ 2020, 6:30 IST
Last Updated 13 ಆಗಸ್ಟ್ 2020, 6:30 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಸೆನೆಟರ್‌ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಾಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಜೋ ಬಿಡೆನ್ ಅವರ ಕ್ರಮ ‘ಅಸಹಜ ಮತ್ತು ಸಮಸ್ಯಾತ್ಮಕವಾದುದು’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.

‘ಬಿಡೆನ್ ಅವರು ಕಮಲಾ ಹ್ಯಾರಿಸ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹ್ಯಾರಿಸ್‌ ಅವರ ಮತಗಳಿಕೆಯ ಏರಿಕೆ ಹಾಗೂ ಕುಸಿತವನ್ನು ನಾನು ಕಂಡಿದ್ದೇನೆ. ಎಲ್ಲವನ್ನು ಕಳೆದುಕೊಂಡು ಅವರು ಹುಚ್ಚಿಯಂತಾಗಿದ್ದರು. ಎಲ್ಲರಿಗಿಂತಲೂ ಹೆಚ್ಚಾಗಿ ಬಿಡೆನ್ ಅವರನ್ನು ಹ್ಯಾರಿಸ್‌ ಅವರೇ ಅಪಮಾನಿಸಿದ್ದರು ಮತ್ತು ಎಲ್ಲರೀತಿಯ ಆರೋಪವನ್ನು ಮಾಡಿದ್ದರು’ ಎಂದು ಟೀಕಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಮರುಆಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್ ಈ ಬಾರಿ ಬಿಡೆನ್-ಹ್ಯಾರಿಸ್ ನೇತೃತ್ವದ ಡೆಮಾಕ್ರಾಟಿಕ್ ಪಕ್ಷದಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.