ADVERTISEMENT

ಅಮೆರಿಕ: ಜಾರ್ಜಿಯಾದಲ್ಲಿ ಮರು ಮತ ಎಣಿಕೆ ಕೋರಿ ಅರ್ಜಿ ಸಲ್ಲಿಕೆ

ಪಿಟಿಐ
Published 22 ನವೆಂಬರ್ 2020, 10:30 IST
Last Updated 22 ನವೆಂಬರ್ 2020, 10:30 IST
ಸಾಂದರ್ಭಿಕ ಚಿತ್ರ                                                                                            –ಎಪಿ/ಪಿಟಿಐ ಚಿತ್ರ
ಸಾಂದರ್ಭಿಕ ಚಿತ್ರ                                                                                            –ಎಪಿ/ಪಿಟಿಐ ಚಿತ್ರ   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರ ತಂಡವು ಜಾರ್ಜಿಯಾದಲ್ಲಿ ಮರು ಮತ ಎಣಿಕೆ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರು ರಿಪಬ್ಲಿಕನ್‌ ಪಕ್ಷದ ಭದ್ರಕೋಟೆ ಜಾರ್ಜಿಯಾದಲ್ಲಿ 1200 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದರ ಬೆನ್ನಲ್ಲೇ ಟ್ರಂಪ್‌ ಅವರ ಪ್ರಚಾರ ತಂಡವು ಜಾರ್ಜಿಯಾ ರಾಜ್ಯದಲ್ಲಿ ಮರು ಮತ ಎಣಿಕೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದೆ.

1992ರ ಬಳಿಕ ಜಾರ್ಜಿಯಾದಲ್ಲಿ ಇದೇ ಮೊದಲ ಬಾರಿ ಡೆಮಾಕ್ರಟಿಕ್‌ ಪಕ್ಷ ಗೆಲುವು ಸಾಧಿಸಿದೆ.

ADVERTISEMENT

‘ಜಾರ್ಜಿಯಾದ ಪ್ರತಿಯೊಂದು ಮತಗಳ ಎಣಿಕೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜಾರ್ಜಿಯಾದಲ್ಲಿ ನ್ಯಾಯಬದ್ದವಾಗಿ ಮತಗಳ ಮರು ಎಣಿಕೆ ಮಾಡುವಂತೆ ನಾವು ಮನವಿ ಮಾಡುತ್ತೇವೆ. ಈ ಪ್ರಕ್ರಿಯೆಯಲ್ಲಿ ಸಹಿ ಹೊಂದಾಣಿಕೆ ಮತ್ತು ಇತರೆ ಸುರಕ್ಷಿತ ಕ್ರಮಗಳನ್ನು ಪಾಲಿಸಬೇಕು’ ಎಂದು ಟ್ರಂಪ್‌ ಪ್ರಚಾರ ತಂಡ ಹೇಳಿಕೆ ಬಿಡುಗಡೆ ಮಾಡಿದೆ.

‘ಸಹಿ ಹೊಂದಾಣಿಕೆ ಆಗದಿದ್ದಲ್ಲಿ ಮರು ಮತ ಎಣಿಕೆ ನಡೆಸುವುದರಲ್ಲಿ ಅರ್ಥವಿಲ್ಲ. ಮತ್ತೆ ನಕಲಿ ಮತಗಳನ್ನು ಎಣಿಸಲ್ಪಡುತ್ತದೆ. ಜನರಿಗೆ ಸುಳ್ಳು ಫಲಿತಾಂಶಗಳನ್ನು ನೀಡುವುದನ್ನು ನಿಲ್ಲಿಸಿ. ಅಕ್ರಮ ಮತಗಳನ್ನು ಎಣಿಸಬಾರದು’ ಎಂದು ತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.