ADVERTISEMENT

ನನಗೆ ಸೂಪರ್‌ಮ್ಯಾನ್‌ ಅನುಭವವಾಗುತ್ತಿದೆ: ಡೊನಾಲ್ಡ್ ಟ್ರಂಪ್‌

ಚುನಾವಣಾ ರ್‍ಯಾಲಿ

ಪಿಟಿಐ
Published 14 ಅಕ್ಟೋಬರ್ 2020, 6:22 IST
Last Updated 14 ಅಕ್ಟೋಬರ್ 2020, 6:22 IST
ಪೆನ್ಸಿಲ್ವೇನಿಯಾದ ಜಾನ್ಸ್‌ಟೌನ್‌ನಲ್ಲಿ ನಡೆದ ಎರಡನೇ ಚುನಾವಣಾ ಪ್ರಚಾರದ ರ‍್ಯಾಲಿಯಲ್ಲಿ ಹಿನ್ನೆಲೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌
ಪೆನ್ಸಿಲ್ವೇನಿಯಾದ ಜಾನ್ಸ್‌ಟೌನ್‌ನಲ್ಲಿ ನಡೆದ ಎರಡನೇ ಚುನಾವಣಾ ಪ್ರಚಾರದ ರ‍್ಯಾಲಿಯಲ್ಲಿ ಹಿನ್ನೆಲೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌   

ವಾಷಿಂಗ್ಟನ್‌: ‘ಕೊರೊನಾ ಸೋಂಕಿಗೆ ಪ್ರಾಯೋಗಿಕ ಔಷಧದ ಚಿಕಿತ್ಸೆ ಪಡೆದ ನಂತರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದು, ನನಗೆ ‘ಸೂಪರ್‌ಮ್ಯಾನ್‌‘ ರೀತಿಯ ಅನುಭವವಾಗುತ್ತಿದೆ‘ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ಕೊರೊನಾದಿಂದ ಗುಣಮುಖರಾದ ನಂತರಪೆನ್ಸಿಲ್ವೇನಿಯಾದ ಜಾನ್ಸ್‌ಟೌನ್‌ನಲ್ಲಿ ನಡೆದ ಎರಡನೇ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಂಪ್‌, ಕಿಕ್ಕಿರಿದು ತುಂಬಿದ್ದ ಸಾರ್ವಜನಿಕರ ಎದುರು, ‘ಕೊರೊನಾ ಚಿಕಿತ್ಸೆ ನಂತರ ನನಗೆ ಸೂಪರ್‌ ಮ್ಯಾನ್‌‘ನಂತಹ ಅನುಭವವಾಗುತ್ತಿದೆ‘ ಎಂದು ಹೇಳಿದರು.

ಇದೇ ವೇಳೆ ಕೊರೊನಾಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಅವರು ಅಭಿನಂದನೆ ಸಲ್ಲಿಸಿದರು.

ADVERTISEMENT

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ, ಶ್ವೇತಭವನದ ವೈದ್ಯರು ಚುನಾವಣಾ ರ್‍ಯಾಲಿಗಳಲ್ಲಿ ಭಾಗವಹಿಸಬಹುದೆಂದು ಅನುಮತಿ ನೀಡಿದ್ದರು. ಇದಾದ ನಂತರ ಸೋಮವಾರದಿಂದ ಪ್ರಾಯೋಗಿಕವಾಗಿ ಫ್ಲೋರಿಡಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಟ್ರಂಪ್ ಭಾಗವಹಿಸಿದ್ದರು.

‘ನನಗೆ ತಿಳಿದಂತೆ ಉತ್ತಮ ಚಿಕಿತ್ಸೆ ಪಡೆದಿದ್ದೇನೆ. ಉತ್ತಮ ಅನುಭವವನ್ನೂ ಪಡೆದಿದ್ದೇನೆ. ಪ್ರತಿಕಾಯಗಳ ಬಗ್ಗೆ ನನಗೆ ಗೊತ್ತಿಲ್ಲ. ಆದರೂ ಅದನ್ನು ತೆಗೆದುಕೊಂಡೆ. ಒಟ್ಟಾರೆ ಈಗ ಸೂಪರ್‌ಮ್ಯಾನ್‌ನಂತಹ ಅನುಭವವಾಗುತ್ತಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.