ADVERTISEMENT

ದುಬೈ: ಹೂತಿ ಭಯೋತ್ಪಾದಕರು ಹಾರಿಸಿದ ಕ್ಷಿಪಣಿ ಧ್ವಂಸಗೊಳಿಸಿದ ಯುಎಇ

ಪಿಟಿಐ
Published 31 ಜನವರಿ 2022, 13:44 IST
Last Updated 31 ಜನವರಿ 2022, 13:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದುಬೈ: ಯೆಮನ್‌ನ ಹೂತಿ ಭಯೋತ್ಪಾದಕರ ಗುಂಪು ತನ್ನತ್ತ ಹಾರಿಸಿದ ಖಂಡಾಂತರ ಕ್ಷಿಪಣಿಯೊಂದನ್ನು ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ರಕ್ಷಣಾ ಪಡೆಗಳು ತಡೆದು ಹೊಡೆದುರುಳಿಸಿವೆ ಎಂದು ರಕ್ಷಣಾ ಸಚಿವಾಲಯಸೋಮವಾರ ತಿಳಿಸಿದೆ.

ಇಸ್ರೇಲ್‌ನ ಅಧ್ಯಕ್ಷ ಐಸಾಕ್‌ ಹೆರ್ಜಾಗ್ ಅವರ ಐತಿಹಾಸಿಕ ಭೇಟಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಕ್ಷಿಪಣಿ ದಾಳಿಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಕ್ಷಿಪಣಿಯ ತುಣುಕುಗಳು ವಸತಿ ಪ್ರದೇಶದ ಹೊರಗೆ ಬಿದ್ದಿವೆ.ಕ್ಷಿಪಣಿ ನಾಶಪಡಿಸುವಲ್ಲಿ ಯುಎಇ ರಕ್ಷಣಾ ಪಡೆಗಳು ಮತ್ತು ಒಕ್ಕೂಟದ ಕಮಾಂಡ್‌ಗಳು ಯಶಸ್ವಿಯಾಗಿವೆ ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ADVERTISEMENT

ಯೆಮನ್‌ನ ಅಲ್‌ ಜಾಫ್‌ನಲ್ಲಿ ಕ್ಷಿಪಣಿಯನ್ನು ರಾತ್ರಿ 12.50ಕ್ಕೆ (ಸ್ಥಳೀಯ ಕಾಲಮಾನ) ನಾಶಪಡಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಟ್ವೀಟ್‌ ಮಾಡಿದ್ದು ನಾಶಪಡಿಸುತ್ತಿರುವ ವಿಡಿಯೊವನ್ನು ಸಹ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.