ಕೀವ್ (ಉಕ್ರೇನ್):ರಷ್ಯಾಕ್ಕೆ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸುವಂತೆಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರಬ್ಡೊಲ್ಲಾಹೈನ್ ಅವರಿಗೆಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಶುಕ್ರವಾರ ಮನವಿ ಮಾಡಿದ್ದಾರೆ.
ರಷ್ಯಾಕ್ಕೆ ಇರಾನ್‌ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂದು ಉಕ್ರೇನ್ ಹಾಗೂ ಅದರ ಮಿತ್ರ ರಾಷ್ಟ್ರಗಳು ಆರೋಪಿಸಿದ್ದವು. ಆದರೆ, ಇರಾನ್ ಇದನ್ನು ಅಲ್ಲಗಳೆದಿತ್ತು.
ಇರಾನ್ ಸಚಿವರೊಂದಿಗೆ ದೂರವಾಣಿ ಮೂಲಕಮಾತುಕತೆ ನಡೆಸಿರುವುದಾಗಿ ಟ್ವೀಟ್ ಮಾಡಿರುವ ಕುಲೆಬಾ, 'ಉಕ್ರೇನ್‌ನಲ್ಲಿ ಮೂಲಸೌಕರ್ಯ ನಾಶಮಾಡಲು ಮತ್ತು ನಾಗರಿಕರನ್ನು ಹತ್ಯೆಮಾಡಲು ಬಳಸಲಾಗುತ್ತಿರುವಶಸ್ತ್ರಾಸ್ತ್ರಗಳನ್ನು ರಷ್ಯಾಕ್ಕೆ ಪೂರೈಸದಂತೆ ಇರಾನ್ ಎದುರು ಬೇಡಿಕೆ ಇಟ್ಟಿದ್ದೇನೆ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.