ಮಾಸ್ಕೋ/ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆ ವಿಶೇಷ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಇದುವರೆಗೆ ನಾಲ್ಕನೇ ಬಾರಿಗೆ ಕೈದಿಗಳ ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿದೆ ಎಂದು ಉಕ್ರೇನ್ ಉಪ ಪ್ರಧಾನಿ ಐರಿನಾ ವೆರೆಶ್ಚುಕ್ ಗುರುವಾರ ಹೇಳಿದ್ದಾರೆ.
ಉಕ್ರೇನ್‌ನ 8 ನಾಗರಿಕರು ಸೇರಿದಂತೆ ಸೆರೆಹಿಡಿಯಲಾಗಿದ್ದ30 ಯುದ್ಧ ಕೈದಿಗಳನ್ನು ರಷ್ಯಾ ಸೇನೆ ಬಿಡುಗಡೆ ಮಾಡಿದೆ ಎಂದುವೆರೆಶ್ಚುಕ್ ಟೆಲಿಗ್ರಾಮ್ ಮೂಲಕ ತಿಳಿಸಿದ್ದಾರೆ.ನಿರ್ದಿಷ್ಟ ಸಂಖ್ಯೆಯನ್ನು ಉಲ್ಲೇಖಿಸದೆ, ಉಕ್ರೇನ್ ಸೇನೆಯೂ ಸೆರೆಯಾಳುಗಳನ್ನು ಬಿಡುಗಡೆಗೊಳಿಸಿದೆ ಎಂದು ಚೀನಾದ 'ಕ್ಸಿನುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.
ವಿನಿಮಯ ಪ್ರಕ್ರಿಯೆ ಅಡಿಯಲ್ಲಿಬಿಡುಗಡೆಯಾದ ಒಟ್ಟು 22 ಸೇನಾ ಸಿಬ್ಬಂದಿ ಪೈಕಿ ಐವರು ಅಧಿಕಾರಿಗಳು ಇದ್ದಾರೆ ಎಂದು ವೆರೆಶ್ಚುಕ್ ತಿಳಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ, ಮೊದಲ ಹಂತದ ವಿನಿಮಯ ಪ್ರಕ್ರಿಯೆಯನ್ನು ಮಾರ್ಚ್ 24ರಂದು ನಡೆಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.