ADVERTISEMENT

ಉಕ್ರೇನ್‌ಗೆ ಬ್ರಿಟನ್‌ನಿಂದ ಇನ್ನಷ್ಟು ನೆರವು

​ಪ್ರಜಾವಾಣಿ ವಾರ್ತೆ
Published 3 ಮೇ 2022, 19:31 IST
Last Updated 3 ಮೇ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಮಂಗಳವಾರ ಉಕ್ರೇನ್‌ ಸಂಸತ್‌ ಉದ್ದೇಶಿಸಿ ಮಾತನಾಡಿದ್ದು, ಹೆಚ್ಚುವರಿಯಾಗಿ 30 ಕೋಟಿ ಬ್ರಿಟಿಷ್‌ ಪೌಂಡ್‌ ಮೌಲ್ಯದ ಸೇನಾ ನೆರವು ನೀಡುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.

‘ರಷ್ಯಾದೊಂದಿನ ಯುದ್ಧದ ಅತ್ಯುತ್ತಮ ಅವಧಿ ಇದು, ಇದನ್ನು ಮುಂದಿನ ತಲೆಮಾರು ಸದಾ ನೆನಪಿನಲ್ಲಿ ಇಟ್ಟಿರುತ್ತದೆ’ ಎಂದು ಹೇಳಿದ ಜಾನ್ಸನ್‌, ಸೇನೆ, ಹಣ, ಮಾನವೀಯ ನೆಲೆಯಲ್ಲಿ ನೆರವು ನೀಡುವುದನ್ನು ಮುಂದುವರಿಸಲಿದೆ ಎಂದರು.

ರಷ್ಯಾ ಸೇನೆ ದುರ್ಬಲ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ನಷ್ಟವನ್ನು ಅನುಭವಿಸಿದ ನಂತರ ರಷ್ಯಾದ ಸೇನೆ ಈಗ ‘ಗಮನಾರ್ಹವಾಗಿ ದುರ್ಬಲವಾಗಿದೆ’. ಸಾಂಪ್ರದಾಯಿಕ ಸೇನಾ ಬಲವನ್ನು ನಿಯೋಜಿಸುವ ರಷ್ಯಾದ ಸಾಮರ್ಥ್ಯದ ಮೇಲೆ ಇದು ಶಾಶ್ವತವಾದ ಪರಿಣಾಮ ಬೀರುತ್ತದೆ ಎಂದು ಬ್ರಿಟನ್‌ ರಕ್ಷಣಾ ಸಚಿವಾಲಯ ಂಗಳವಾರ ಟ್ವೀಟ್‌ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.