ADVERTISEMENT

ಆಕ್ರಮಿತ ಪ್ರದೇಶಗಳಲ್ಲಿನ ಜನಾಭಿಪ್ರಾಯ ತಿರುಚಲು ರಷ್ಯಾ ಯೋಜನೆ: ಝೆಲೆನ್‌ಸ್ಕಿ

ಏಜೆನ್ಸೀಸ್
Published 22 ಏಪ್ರಿಲ್ 2022, 4:20 IST
Last Updated 22 ಏಪ್ರಿಲ್ 2022, 4:20 IST
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ   

ಕೀವ್: ರಷ್ಯಾ ಭಾಗಶಃ ವಶಪಡಿಸಿಕೊಂಡಿರುವ ಖೆರ್ಸನ್ ಮತ್ತು ಝಪೊರಿಝಿಯಾ ಪ್ರದೇಶಗಳ ಸ್ವಾತಂತ್ರ್ಯದ ಕುರಿತಂತೆ ಬಂದಿರುವ ಜನಾಭಿಪ್ರಾಯವನ್ನು 'ತಿರುಚಲು' ರಷ್ಯಾ ಯೋಜಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

ಗುರುವಾರ ಸಂಜೆ ವಿಡಿಯೊ ಸಂದೇಶದಲ್ಲಿ ಮಾತನಾಡಿರುವ ಝೆಲೆನ್‌ಸ್ಕಿ, ರಷ್ಯಾ ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿರುವ ನಿವಾಸಿಗಳು ತಮ್ಮ ಪಾಸ್‌ಪೋರ್ಟ್ ಸಂಖ್ಯೆಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ರಷ್ಯಾದ ಪಡೆಗಳಿಗೆ ಒದಗಿಸದಂತೆ ಮನವಿ ಮಾಡಿದ್ದಾರೆ.

'ರಷ್ಯಾದ ಈ ನಡೆಯು ನಿಮಗೆ ಸಹಾಯ ಮಾಡಲು ಅಲ್ಲ... ಬದಲಿಗೆ ನಿಮ್ಮ ಭೂಮಿಯ ಮೇಲಿನ ಜನಾಭಿಪ್ರಾಯ ಸಂಗ್ರಹಣೆಯನ್ನು ತಿರುಚುವ ಗುರಿಯನ್ನು ಹೊಂದಿದೆ. ಇದನ್ನ ಕಾರ್ಯರೂಪಕ್ಕೆ ತರಲು ಒಂದು ವೇಳೆ ಮಾಸ್ಕೋದಿಂದ ಆದೇಶ ಬಂದರೆ, ಇದು ವಾಸ್ತವ. ಹುಷಾರಾಗಿರಿ' ಎಂದು ಹೇಳಿದ್ದಾರೆ.

ADVERTISEMENT

ಮಾರ್ಚ್ ಆರಂಭದಲ್ಲಿ ಹೆಚ್ಚಿನ ಸಂಖ್ಯೆಯ ನಿವಾಸಿಗಳು ರಷ್ಯಾದ ಒಕ್ಕೂಟಕ್ಕೆ ಸೇರಲು ಮತ ಹಾಕಿದ್ದ 2014 ರ ಕ್ರೈಮಿಯಾ ಸಮೀಕ್ಷೆಯಂತೆಯೇ ರಷ್ಯಾ ಖೆರ್ಸನ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಯೋಜಿಸುತ್ತಿದೆ ಎಂದು ಉಕ್ರೇನ್ ಆರೋಪಿಸಿತ್ತು.

ಈ ಪ್ರದೇಶವನ್ನು ರಷ್ಯಾ ಸ್ವಾಧೀನಪಡಿಸಿಕೊಂಡ ನಂತರ ಚಲಾವಣೆಗೊಂಡ ಆ ಮತದಾನವನ್ನು ಉಕ್ರೇನ್ ಸರ್ಕಾರ ಕಾನೂನುಬಾಹಿರವೆಂದು ಖಂಡಿಸಿತ್ತು.

ರಷ್ಯಾ ಪರ ಪ್ರದೇಶಗಳಾದ ಡೊನೆಟ್‌ಸ್ಕ್ ಮತ್ತು ಲುಗಾನ್‌ಸ್ಕ್ ಕೂಡ ಈಗಾಗಲೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿವೆ.

'ಯಾವುದೇ 'ಖೆರ್ಸನ್ ಪೀಪಲ್ಸ್ ರಿಪಬ್ಲಿಕ್'ಗಳು ಹಾರಲು ಬಯಸುವುದಿಲ್ಲ'. ಒಂದು ವೇಳೆ ಯಾರಾದರೂ ಹೊಸ ಸೇರ್ಪಡೆಯನ್ನು ಬಯಸಿದರೆ, ಅದು ರಷ್ಯಾದ ಮೇಲೆ ಹೊಸ ಪ್ರಬಲ ನಿರ್ಬಂಧ ವಿಧಿಸುವಿಕೆಗೆ ಮಾತ್ರ ಕಾರಣವಾಗಬಹುದು ಎಂದು ಝೆಲೆನ್‌ಸ್ಕಿ ಎಚ್ಚರಿಸಿದ್ದಾರೆ.

ಫೆಬ್ರುವರಿ 24 ರಂದು ಉಕ್ರೇನ್ ಮೇಲೆ ಆಕ್ರಮಣದ ನಂತರ ರಷ್ಯಾದ ಪಡೆಗಳು ವಶಪಡಿಸಿಕೊಂಡ ಮೊದಲ ಪ್ರಮುಖ ನಗರ ಖೆರ್ಸನ್. ಉತ್ತರಕ್ಕೆ, ಉಕ್ರೇನ್ ವಶದಲ್ಲಿರುವ ಝಪೋರಿಝಿಯಾ ನಗರದ ಸುತ್ತಲಿನ ವಿಶಾಲ ಪ್ರದೇಶವನ್ನು ಸಹ ರಷ್ಯಾ ಪಡೆಗಳು ನಿಯಂತ್ರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.