ಡ್ರೋನ್
(ಸಾಂದರ್ಭಿಕ ಚಿತ್ರ)
ಕೀವ್: ಶನಿವಾರ ರಾತ್ರಿ ಪೂರ್ತಿ ರಷ್ಯಾ ಉಡಾಯಿಸಿದ 92 ಡ್ರೋನ್‌ಗಳ ಪೈಕಿ 51 ಅನ್ನು ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ಉಕ್ರೇನ್ ತಿಳಿಸಿದೆ.
ರಷ್ಯಾದ ಉಳಿದ 31 ಡ್ರೋನ್‌ಗಳು ಕಾಣೆಯಾಗಿವೆ ಎಂದು ವಾಯುಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
ರಷ್ಯಾ ದಾಳಿಯಿಂದಾಗಿ ಕೀವ್, ಜೈಟೊಮಿರ್, ಸುಮಿ ಮತ್ತು ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶಗಳಲ್ಲಿ ಹಾನಿ ಉಂಟಾಗಿದೆ ಎಂದು ಅದು ತಿಳಿಸಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಹುಟ್ಟೂರು ಮಧ್ಯ ಉಕ್ರೇನ್‌ನ ಕ್ರಿವಿ ರಿಹ್ ನಗರದ ಮೇಲೆ ಶುಕ್ರವಾರ ರಷ್ಯಾದ ಕ್ಷಿಪಣಿ ದಾಳಿ ನಡೆಸಿದೆ. ಘಟನೆಯಲ್ಲಿ ಕನಿಷ್ಠ 14 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.