ADVERTISEMENT

ರಷ್ಯಾ ಆಕ್ರಮಣ: ಸಾವಿನ ಬಗ್ಗೆ ಭಿನ್ನ ಮಾಹಿತಿ ಹಂಚಿಕೊಂಡ ಉಕ್ರೇನ್, ವಿಶ್ವಸಂಸ್ಥೆ

ರಾಯಿಟರ್ಸ್
Published 28 ಫೆಬ್ರುವರಿ 2022, 9:44 IST
Last Updated 28 ಫೆಬ್ರುವರಿ 2022, 9:44 IST
ರಷ್ಯಾ ವಿರುದ್ಧದ ಪ್ರತಿಭಟನೆ ವೇಳೆ ರಷ್ಯಾ ರಾಯಭಾರ ಕಚೇರಿ ಮುಂದೆ ಕಣ್ಣೀರಿಟ್ಟ ಯುವತಿ– ಚಿತ್ರ‌– ಎಎಫ್‌ಪಿ
ರಷ್ಯಾ ವಿರುದ್ಧದ ಪ್ರತಿಭಟನೆ ವೇಳೆ ರಷ್ಯಾ ರಾಯಭಾರ ಕಚೇರಿ ಮುಂದೆ ಕಣ್ಣೀರಿಟ್ಟ ಯುವತಿ– ಚಿತ್ರ‌– ಎಎಫ್‌ಪಿ   

ಜಿನೆವಾ: ರಷ್ಯಾದ ಆಕ್ರಮಣದಿಂದ ಉಕ್ರೇನ್‌ನ 94 ನಾಗರಿಕರು ಮೃತಪಟ್ಟು 354 ಜನ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮೇಲ್ವಿಚಾರಣಾ ತಂಡ ಸೋಮವಾರ ಖಚಿತಪಡಿಸಿದೆ.

ರಷ್ಯಾದ ದಾಳಿಯು ಉಕ್ರೇನ್‌ನಲ್ಲಿ ಮಾನವೀಯತೆಯ ಬಹುದೊಡ್ಡ ಬಿಕ್ಕಟ್ಟನ್ನು ತೆರದಿಡಲಿದೆ. ನಾಗರಿಕರಿಗೆ ಸಂಬಂಧಿಸಿದ ಸಾವುನೋವುಗಳು ಅಪಾರವಾಗುವ ಸಾದ್ಯತೆ ಇದೆ ಎಂದು ಅದು ಹೇಳಿದೆ.

ಆದರೆ, ಇನ್ನೊಂದೆಡೆರಷ್ಯಾ ನಡೆಸುತ್ತಿರುವ ಆಕ್ರಮಣದಿಂದಾಗಿ ತನ್ನ ದೇಶದಲ್ಲಿ 14 ಮಕ್ಕಳು ಸೇರಿದಂತೆ ಒಟ್ಟು 352 ನಾಗರಿಕರು ಇದುವರೆಗೆ ಮೃತಪಟ್ಟಿದ್ದಾರೆ.116 ಮಕ್ಕಳು ಮತ್ತು 1,684 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ತಿಳಿಸಿದೆ.

ADVERTISEMENT

ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಸಂಘರ್ಷದಿಂದಾಗಿ ಉಕ್ರೇನ್ ಸೇನೆಯಲ್ಲಿ ಸಂಭವಿಸಿರುವ ಸಾವುನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಆಕ್ರಮಣದ ವಿಚಾರವಾಗಿ ಭಾನುವಾರ ಹೇಳಿಕೆ ನೀಡಿರುವ ರಷ್ಯಾ,ಉಕ್ರೇನ್‌ ಸೇನೆಯನ್ನು ಗುರಿಯಾಗಿಸಿ ಮಾತ್ರವೇ ದಾಳಿ ನಡೆಸುತ್ತಿರುವುದಾಗಿ ಮತ್ತು ಅಲ್ಲಿನ (ಉಕ್ರೇನ್‌) ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.ಜೊತೆಗೆ, ತನ್ನ ಸೇನಾಪಡೆಯ ಯೋಧರೂ ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ಆದರೆ, ರಷ್ಯಾರಕ್ಷಣಾ ಸಚಿವಾಲಯ ನಿರ್ದಿಷ್ಟ ಸಂಖ್ಯೆಯನ್ನು ಉಲ್ಲೇಖಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.