ADVERTISEMENT

‘ಹವಾಮಾನ ವೈಪರೀತ್ಯ ತಡೆಗೆ ಮಹತ್ವದ ಬದಲಾವಣೆ ಅವಶ್ಯ’

ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆ

ಏಜೆನ್ಸೀಸ್
Published 8 ಅಕ್ಟೋಬರ್ 2018, 20:17 IST
Last Updated 8 ಅಕ್ಟೋಬರ್ 2018, 20:17 IST
   

ಇಂಚನ್ (ದಕ್ಷಿಣ ಕೊರಿಯಾ): ಜಾಗತಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯ ತಡೆಗಟ್ಟಲು ಸಮಯ ಮೀರಿಹೋಗುತ್ತಿದೆ ಎಂದುಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆ, ವಿಪತ್ತು ತಡೆಗಟ್ಟಬೇಕೆಂದರೆ ಹಿಂದೆಂದೂ ಆಗದ ಮಟ್ಟದಲ್ಲಿ ಪ್ರಮುಖ ಸಾಮಾಜಿಕ ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳು ಆಗಬೇಕಾಗುತ್ತವೆ ಎಂದು ಹೇಳಿದೆ.

ಭೂಮಿಯ ಮೇಲ್ಮೈ ತಾಪಮಾನ 1 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇದರಿಂದ ಪ್ರವಾಹ, ಬರಗಾಲ ಹಾಗೂ ಸಮುದ್ರದಲ್ಲಿ ತೀವ್ರ ಒತ್ತಡಕಾರಿಯಾದ ಚಂಡಮಾರುತ ಉಂಟಾಗುವ ಅಪಾಯ ಇದೆ ಎಂದು ‘ಹವಾಮಾನ ಬದಲಾವಣೆಯ ಅಂತರ್‌ಸರ್ಕಾರದ ಸಮಿತಿ’ (ಐ‍‍ಪಿಸಿಸಿ) ವರದಿಯಲ್ಲಿ ವಿಶ್ವಸಂಸ್ಥೆಯನ್ನು ಉಲ್ಲೇಖಿಸಿ ಹೇಳಲಾಗಿದೆ.

ಅಲ್ಲದೆ ಭೂಮಿಯ ಮೇಲ್ಮೈ ತಾಪಮಾನ 3ರಿಂದ 4 ಡಿಗ್ರಿ ಸೆಲ್ಸಿಯಸ್ ತಲುಪುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದೂ ತಿಳಿಸಲಾಗಿದೆ.

ADVERTISEMENT

ಜಾಗತಿಕ ತಾಪಮಾನದಿಂದ ಉಂಟಾಗುತ್ತದೆ ಎಂದು ಅಂದಾಜಿಸಿದ್ದ ಸಂಕಷ್ಟ ಅವಧಿಗೆ ಮೊದಲೇ ಎದುರಾಗಿದೆ ಹಾಗೂ ಹೆಚ್ಚು ತೀವ್ರವಾಗಿ ಬಾಧಿಸುತ್ತಿದೆ ಎನ್ನುವುದು ಈ ವರದಿಯಿಂದ ತಿಳಿಯುತ್ತಿದೆ.

‘ಭವಿಷ್ಯದಲ್ಲಿ ಆಗಬಹುದು ಎಂದು ವಿಜ್ಞಾನಿಗಳು ಊಹಿಸಿದ್ದ ಸಂಗತಿಗಳು ಈಗಲೇ ಸಂಭವಿಸುತ್ತಿವೆ’ ಎಂದು ಗ್ರೀನ್‌ಪೀಸ್‌ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಜೆನಿಫರ್ ಮಾರ್ಗನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.