ADVERTISEMENT

Covid-19 World Update: ರಷ್ಯಾದಲ್ಲಿ 15 ಹೊಸ ಪ್ರಕರಣ ಪತ್ತೆ

ಏಜೆನ್ಸೀಸ್
Published 14 ಮೇ 2020, 16:31 IST
Last Updated 14 ಮೇ 2020, 16:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌:ಜಾನ್ಸ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ವರದಿಯಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 4387438 ಆಗಿದೆ.ಅಮೆರಿಕದಲ್ಲಿ- 1395265, ರಷ್ಯಾ- 252245, ಬ್ರಿಟನ್- 234431 ಮಂದಿಗೆ ಸೋಂಕು ತಗುಲಿದೆ.ಇಲ್ಲಿಯವರೆಗೆ 298392 ಮಂದಿ ಸಾವಿಗೀಡಾಗಿದ್ದಾರೆ.ಈ ಪೈಕಿ ಅಮೆರಿಕ-84313, ಬ್ರಿಟನ್-33692, ಇಟಲಿ-31106 ಮಂದಿ ಸಾವಿಗೀಡಾಗಿದ್ದಾರೆ

ಬಾಂಗ್ಲಾದೇಶದಲ್ಲಿರುವ ರೋಹಿಂಗ್ಯಾ ಶಿಬಿರದಲ್ಲಿರುವ ಇಬ್ಬರಿಗೆ ಕೊರೊನಾಸೋಂಕು ಪತ್ತೆಯಾಗಿದೆ. ಇದೇ ಮೊದಲ ಬಾರಿ ರೋಹಿಂಗ್ಯಾಗಳಿಗೆ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಬಲೂಚಿಸ್ತಾನದ ವಿತ್ತ ಸಚಿವ ಜಹೂರ್ ಬುಲೇದಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಬುಲೇದಿ ಅವರಿಗೆ ರೋಗ ಲಕ್ಷಣಗಳೇನೂ ಇರಲಿಲ್ಲ. ಸೋಂಕು ತಗುಲಿರುವ ಬಗ್ಗೆ ಅವರೇ ಟ್ವೀಟಿಸಿದ್ದು ಸ್ವಯಂ ಕ್ವಾರಂಟೈನಲ್ಲಿರುವುದಾಗಿಹೇಳಿದ್ದಾರೆ .

ADVERTISEMENT

ಚೀನಾದಲ್ಲಿ ಗುರುವಾರ ಹೊಸ 15 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 12 ಮಂದಿಗೆ ರೋಗಲಕ್ಷಣಗಳು ಇರಲಿಲ್ಲ.ಇತ್ತ ವುಹಾನ್ ನಗರದಲ್ಲಿ 11 ದಶಲಕ್ಷ ಜನರನ್ನು ತಪಾಸಣೆಗೊಳಪಡಿಸಲಾಗಿದೆ.
ಜಾಗತಿಕವಾಗಿ ಅಮೆರಿಕ ಹೆಚ್ಚು ಕೊರೊನಾ ಬಾಧಿತ ರಾಷ್ಟ್ರವಾಗಿದ್ದು, 13,89,935 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಬಾಲ್ಟಿಮೋರ್‌ ಮೂಲದ ಶಾಲೆಯೊಂದು ವರದಿ ಮಾಡಿದೆ.

ಇಂಗ್ಲೆಂಡ್‌ನಲ್ಲಿ1,31,932 ಮಂದಿ ಸೋಂಕಿನಿಂದ ಬಳಲುತ್ತಿದ್ದು,27,432 ಮಂದಿಸಾವಿಗೀಡಾಗಿದ್ದಾರೆ. ರಷ್ಯಾದಲ್ಲಿ2,42,271 ಮಂದಿಗೆ ಸೋಂಕು ತಗುಲಿದ್ದು,2,212 ಮಂದಿ ಮೃತಪಟ್ಟಿದ್ದಾರೆ.

ಸ್ಪೇನ್‌ನಲ್ಲಿ271,095 ಮಂದಿ ಸೋಂಕಿತರಿದ್ದು,27,104 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ2,22,104 ಮಂದಿಗೆ ಸೋಂಕು ದೃಢಪಟ್ಟಿದ್ದು, 31,106 ಮಂದಿಸಾವನಪ್ಪಿದ್ದಾರೆ.

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ35,298 ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದು, ಇವರೆಗೂ761 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.