ADVERTISEMENT

ಹುತಿ ಗುರಿಯಾಗಿಸಿ ಯೆಮೆನ್ ತೈಲ ಸಂಗ್ರಹಾಗಾರಕ್ಕೆ ಅಮೆರಿಕ ದಾಳಿ; 20 ಸಾವು

ಏಜೆನ್ಸೀಸ್
Published 18 ಏಪ್ರಿಲ್ 2025, 5:45 IST
Last Updated 18 ಏಪ್ರಿಲ್ 2025, 5:45 IST
<div class="paragraphs"><p>ದಾಳಿ</p></div>

ದಾಳಿ

   

(ರಾಯಿಟರ್ಸ್ ಪ್ರಾತಿನಿಧಿಕ ಚಿತ್ರ)

ಸನಾ: ಹುತಿ ಬಂಡುಕೋರರನ್ನು ಗುರಿಯಾಗಿಸಿ ಯೆಮೆನ್‌ನ ಪ್ರಮುಖ ತೈಲ ಸಂಗ್ರಹಾಗಾರಕ್ಕೆ ಅಮೆರಿಕ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಈ ತೈಲ ಸಂಗ್ರಹಾಗಾರ ಘಟಕ ಹುತಿ ಬಂಡುಕೋರರ ನಿಯಂತ್ರಣದಲ್ಲಿತ್ತು ಎಂದು ಅಮೆರಿಕ ಹೇಳಿಕೊಂಡಿದೆ.

ಇರಾನ್ ಬೆಂಬಲಿತ ಹುತಿಗೆ ಸಿಗುವ ಆರ್ಥಿಕ ಬೆಂಬಲವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರಾಸ್ ಇಸ್ಸಾ ತೈಲ ಘಟಕದ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಕ ಸೇನೆ ತಿಳಿಸಿದೆ.

ಅಮೆರಿಕ ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಸುಮಾರು 50 ಕಾರ್ಮಿಕರು ಗಾಯಗೊಂಡಿದ್ದಾರೆ ಹುತಿ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ.

ಈ ತೈಲ ಘಟಕವು ಯೆಮೆನ್‌ನ ಪಶ್ಚಿಮ ಕರಾವಳಿಯ ಕೆಂಪು ಸಮುದ್ರದ ದಂಡೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.