ಸಿಖ್
– ಐಸ್ಟಾಕ್ ಚಿತ್ರ
ನ್ಯೂಯಾರ್ಕ್: ಅಮೆರಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಕಡ್ಡಾಯವಾಗಿ ‘ಕ್ಲೀನ್ ಶೇವ್’ ಮಾಡಬೇಕು ಎನ್ನುವ ನಿಯಮದಿಂದ ಸಿಖ್ ಸಮುದಾಯದ ಸಿಬ್ಬಂದಿಗೆ ವಿನಾಯಿತಿ ನೀಡಬೇಕು ಎಂದು ಅಮೆರಿಕ ಸಂಸದರೊಬ್ಬರು ‘ಪೆಂಟಗನ್‘ಗೆ ಪತ್ರ ಬರೆದಿದ್ದಾರೆ. ತಲೆಗೂದಲು ಹಾಗೂ ಗಡ್ಡ ಬಿಡುವುದು ಅವರ ನಂಬಿಕೆಯ ಮೂಲ ತತ್ವ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಪೆಂಟಗಾನ್‌ನ ಕಾರ್ಯದರ್ಶಿ ವಾರ್ ಪಟೇಟೆ ಹೇಗ್‌ಸೆಥ್ ಅವರಿಗೆ ಪತ್ರ ಬರೆದಿರುವ ಸಂಸದ ಥೋಮಸ್ ಆರ್. ಸುಝ್ಝಿ, ಸಿಖ್ಖರು ವಿಶ್ವಯುದ್ಧ –1, 2 ಸೇರಿ ಅಮೆರಿಕದ ಸೇನೆಯೊಂದಿಗೆ ಹೋರಾಟ ಮಾಡುತ್ತಲೇ ಬಂದಿದ್ದಾರೆ ಎಂದು ಹೇಳಿದ್ದಾರೆ.
‘ದೇಶ ಸೇವೆ ಸಿಖ್ಖರಿಗೆ ಪವಿತ್ರ ಕರ್ತವ್ಯ. ದೇವರ ಮುಂದೆ ಎಲ್ಲರೂ ಸಮಾನರು ಎಂದು ಸಾರುವ ಸಲುವಾಗಿ ಸಿಖ್ಖರು ಗಡ್ಡ ಹಾಗೂ ಕೂದಲು ಕತ್ತರಿಸುವುದಿಲ್ಲ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಸೇನೆಯ ವೃತ್ತಿಪರತೆ ಹಾಗೂ ಏಕರೂಪದ ಮಾನದಂಡಗಳಿಗೆ ಪ್ರಾಮುಖ್ಯತೆ ಇದ್ದರೂ, ನಂಬಿಕೆ ಆಧಾರಿತ ಅಥವಾ ವೈದ್ಯಕೀಯ ಸೌಕರ್ಯಗಳನ್ನು ಕಡೆಗಣಿಸಬಾರದು ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಧಾರ್ಮಿಕ, ಸಾಂಸ್ಕೃತಿಕ ಅಥವಾ ವೈದ್ಯಕೀಯ ವಿನಾಯಿತಿಗಳಿಲ್ಲದೆ ‘ಗಡ್ಡ ನಿಷೇಧ’ವನ್ನು ಜಾರಿಗೆ ತರಬಹುದು ಎನ್ನುವ ಭಯ ಸಿಖ್, ಮುಸ್ಲಿಂ ಮತ್ತು ಆಪ್ರೊ ಅಮರಿಕ ಸಿಬ್ಬಂದಿಗಳಲ್ಲಿ ಇದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.