ADVERTISEMENT

ನಾರ್ಡಸ್, ರೋಮರ್‌ಗೆ ನೊಬೆಲ್

ಅಮೆರಿಕದ ಅರ್ಥಶಾಸ್ತ್ರಜ್ಞರಿಗೆ ಒಲಿದ ಅತ್ಯುನ್ನತ ಪುರಸ್ಕಾರ

ಏಜೆನ್ಸೀಸ್
Published 8 ಅಕ್ಟೋಬರ್ 2018, 20:35 IST
Last Updated 8 ಅಕ್ಟೋಬರ್ 2018, 20:35 IST
ಪಾಲ್ ರೋಮರ್ ಹಾಗೂ ವಿಲಿಯಂ ನಾರ್ಡಸ್
ಪಾಲ್ ರೋಮರ್ ಹಾಗೂ ವಿಲಿಯಂ ನಾರ್ಡಸ್    

ಸ್ಟಾಕ್‌ಹೋಮ್: ಆವಿಷ್ಕಾರ ಮತ್ತು ಹವಾಮಾನ ವೈಪರೀತ್ಯದಿಂದ ಆರ್ಥಿಕ ಬೆಳವಣಿಗೆ ಮೇಲಾಗುವ ಪರಿಣಾಮ ಕುರಿತು ನಡೆಸಿದ ಅಧ್ಯಯನ ಹಾಗೂ ಸಂಶೋಧನೆಗಾಗಿ ಅಮೆರಿಕದ ಅರ್ಥಶಾಸ್ತ್ರಜ್ಞರಾದ ವಿಲಿಯಂ ನಾರ್ಡಸ್ ಹಾಗೂ ಪಾಲ್ ರೋಮರ್ ಅವರು 2018ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.

ಯೇಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ನಾರ್ಡಸ್ (77) ಹಾಗೂ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್‌ ಸ್ಕೂಲ್ ಆಫ್ ಬ್ಯುಸಿನೆಸ್‌ನ ಪ್ರಾಧ್ಯಾಪಕ ರೋಮರ್ (62) ಅವರು ‘ದೀರ್ಘಾವಧಿಗೆ ಸ್ಥಿರವಾದ ಬೆಳವಣಿಗೆ ಸಾಧಿಸುವುದು ಹೇಗೆ ಎನ್ನುವುದಕ್ಕೆ ಸಂಬಂಧಿಸಿ ನಮ್ಮ ಕಾಲಘಟ್ಟದ ಅತ್ಯಂತ ಮೂಲಭೂತ ಹಾಗೂ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದಾರೆ’ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ತಿಳಿಸಿದೆ.

₹7.47 ಕೋಟಿ ಪ್ರಶಸ್ತಿ ಮೊತ್ತವನ್ನು ಇಬ್ಬರೂ ಹಂಚಿಕೊಳ್ಳಲಿದ್ದಾರೆ. ಡಿಸೆಂಬರ್ 10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಜತೆಗೆ ಪ್ರಮಾಣಪತ್ರ ಹಾಗೂ ಚಿನ್ನದ ಪದಕ ಸಹ ಪ್ರದಾನ ಮಾಡಲಾಗುತ್ತದೆ.

ADVERTISEMENT

ವ್ಯಾಖ್ಯಾನ ವಿಸ್ತರಿಸಿದ ಹೆಮ್ಮೆ
‘ಪರಿಸರ ಮತ್ತು ಜ್ಞಾನದ ಜತೆ ಮಾರುಕಟ್ಟೆಯ ಆರ್ಥಿಕತೆ ಹೇಗೆ ವ್ಯವಹರಿಸುತ್ತದೆ ಎನ್ನುವುದ ವಿವರಿಸುವ ಮಾದರಿ ರೂಪಿಸಿ, ಆರ್ಥಿಕ ವಿಶ್ಲೇಷಣೆಯ ವ್ಯಾಖ್ಯಾನ ವಿಸ್ತರಿಸಿದ್ದಾರೆ’ ಎಂದು ಅಕಾಡೆಮಿಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.