ADVERTISEMENT

ವಲಸಿಗರಿಗೆ ಪೌರತ್ವ: ಎರಡು ಮಸೂದೆಗಳಿಗೆ ಅಮೆರಿಕದ ಕೆಳಮನೆ ಅನುಮೋದನೆ

ಪಿಟಿಐ
Published 19 ಮಾರ್ಚ್ 2021, 9:46 IST
Last Updated 19 ಮಾರ್ಚ್ 2021, 9:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ವಲಸಿಗರಿಗೆ ಹಾಗೂ ಎಚ್‌–1ಬಿ ವೀಸಾ ಅಡಿ ಅಮೆರಿಕಕ್ಕೆ ಬಂದವರ ಮಕ್ಕಳಿಗೆ ಪೌರತ್ವ ನೀಡಲು ದಾರಿ ಸುಗಮಗೊಳಿಸುವ ಎರಡು ಮಹತ್ವದ ಮಸೂದೆಗಳಿಗೆ ಅಮೆರಿಕದ ಹೌಸ್‌ ಆಫ್‌ ‍ರೆ‍ಪ್ರೆಸೆಂಟೇಟಿವ್‌ (ಕೆಳಮನೆ) ಅನುಮೋದನೆ ನೀಡಿದೆ.

‘ಅಮೆರಿಕನ್‌ ಡ್ರೀಮ್‌ ಆ್ಯಂಡ್‌ ಪ್ರಾಮಿಸ್‌ ಆ್ಯಕ್ಟ್‌–2021’ ಮಸೂದೆಗೆ ಕೆಳಮನೆ 228–197 ಮತಗಳಿಂದ ಅನುಮೋದನೆ ನೀಡಿತು. ಸೆನೆಟ್‌ನ ಅನುಮೋದನೆ ದೊರೆತ ನಂತರ, ಈ ಮಸೂದೆ ಕಾಯ್ದೆ ರೂಪದಲ್ಲಿ ಜಾರಿಯಾಗುವುದು.

‘ನಾನು ಈ ಮಸೂದೆಯನ್ನು ಬೆಂಬಲಿಸುತ್ತೇನೆ. ಮಹತ್ವದ ಈ ಮಸೂದೆಗೆ ಅನುಮೋದನೆ ನೀಡಿರುವ ಹೌಸ್‌ ಆಫ್‌ ‍ರೆ‍ಪ್ರೆಸೆಂಟೇಟಿವ್‌ಅನ್ನು ಅಭಿನಂದಿಸುತ್ತೇನೆ’ ಎಂದು ಅಧ್ಯಕ್ಷ ಜೋ ಬೈಡನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಮಗುವಾಗಿದ್ದಾಗ ಪಾಲಕರೊಂದಿಗೆ ಅಮೆರಿಕಕ್ಕೆ ಬಂದವರಿಗೆ ‘ಡ್ರೀಮರ್ಸ್‌’ ಎಂದು ಕರೆಯಲಾಗುತ್ತದೆ. ಇವರನ್ನು ಸೇರಿದಂತೆ ವಿವಿಧ ವರ್ಗದ ವಲಸಿಗರು ಅಮೆರಿಕದ ಪೌರತ್ವದ ನಿರೀಕ್ಷೆಯಲ್ಲಿದ್ದಾರೆ.

5 ಲಕ್ಷಕ್ಕೂ ಅಧಿಕ ಭಾರತೀಯರು ಸೇರಿದಂತೆ 1.10 ಕೋಟಿ ವಲಸಿಗರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ಜೋ ಬೈಡನ್‌ ಅವರು ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದ ದಾಖಲೆಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.