ADVERTISEMENT

ಶೇ 50ರಷ್ಟು ಸುಂಕ: ಭಾರತದೊಂದಿಗೆ ವ್ಯಾಪಾರ ಚರ್ಚೆ ಇಲ್ಲ; ಡೊನಾಲ್ಡ್ ಟ್ರಂಪ್

ಏಜೆನ್ಸೀಸ್
Published 8 ಆಗಸ್ಟ್ 2025, 2:35 IST
Last Updated 8 ಆಗಸ್ಟ್ 2025, 2:35 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್

ವಾಷಿಂಗ್ಟನ್‌: ಭಾರತದಿಂದ ಆಮದು ಮಾಡಿ ಕೊಳ್ಳುವ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ಹೆಚ್ಚಳ ಮಾಡಿದ ನಂತರ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗೆ ಯಾವುದೇ ವ್ಯಾಪಾರ ಚರ್ಚೆ ನಡೆಯದು ಎಂದು ಹೇಳಿದ್ದಾರೆ.

ADVERTISEMENT

ಶ್ವೇತಭವನದ ಓವಲ್ ಕಚೇರಿಯಲ್ಲಿ ಎಎನ್‌ಐ ಸುದ್ದಿಸಂಸ್ಥೆಯ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸುಂಕ ಸಂಬಂಧಿತ ವಿವಾದ ಬಗೆಹರಿಯುವವರೆಗೆ ಚರ್ಚೆಗೆ ಅವಕಾಶವಿಲ್ಲ, ಇದನ್ನು ಬಗೆಹರಿಸಿಕೊಂಡ ಬಳಿಕ ಮಾತ್ರ ಚರ್ಚೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕವು ಭಾರತದ ಮೇಲೆ ದುಪ್ಪಟ್ಟು ಸುಂಕ ವಿಧಿಸುತ್ತಿದೆ. 

ಶೇ 25ರುಷ್ಟು ಸುಂಕ ವಿಧಿಸುವ ಕ್ರಮವು ಆಗಸ್ಟ್ 7ರಿಂದಲೇ ಜಾರಿಗೆ ಬಂದಿದೆ. ಹೆಚ್ಚುವರಿ ಶೇ 25ರಷ್ಟು ಸುಂಕವು ಮುಂದಿನ 21 ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಸದ್ಯ ಸಾಗಣೆಯಲ್ಲಿರುವ ಸರಕುಗಳು ಮತ್ತು ಕೆಲವು ವಿನಾಯಿತಿ ಸಾಮಗ್ರಿಗಳನ್ನು ಹೊರತುಪಡಿಸಿ, ಎಲ್ಲಾ ಸರಕುಗಳ ಮೇಲೂ ಇದು ಅನ್ವಯವಾಗಲಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ನಡೆಯ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ವ್ಯಾಪಾರ ಅಥವಾ ಆರ್ಥಿಕ ಒತ್ತಡಕ್ಕೆ ಭಾರತ ತಲೆಬಾಗಲ್ಲ ಎಂಬ ದಿಟ್ಟ ಸಂದೇಶವನ್ನು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.