ADVERTISEMENT

ಪಾಕ್‌ ಸೇನೆ ಮುಖ್ಯಸ್ಥಗೆ ಅಮೆರಿಕ ಆಹ್ವಾನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 3:00 IST
Last Updated 12 ಜೂನ್ 2025, 3:00 IST
ಅಸೀಮ್‌ ಮುನೀರ್‌
ಅಸೀಮ್‌ ಮುನೀರ್‌   

ನವದೆಹಲಿ: ಪಾಕಿಸ್ತಾನ ಸೇನೆ ಮುಖ್ಯಸ್ಥ ಅಸೀಮ್‌ ಮುನೀರ್‌ ಅವರನ್ನು ಆಹ್ವಾನಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಇನ್ನೊಂದೆಡೆ, ಇಸ್ಲಾಮಿಕ್‌ ಸ್ಟೇಟ್‌(ಖೋರಾಸನ್) ಉಗ್ರರನ್ನು ಸದೆಬಡಿಯುವಲ್ಲಿ ಪಾಕಿಸ್ತಾನ ನೀಡಿದ ಸಹಕಾರವನ್ನು ಅಮೆರಿಕ ಮಿಲಿಟರಿ ಕಮಾಂಡರ್‌ ಹೊಗಳಿದ್ದಾರೆ.

ಕೆನಡಾದಲ್ಲಿ ನಡೆಯಲಿರುವ ಜಿ–7 ಶೃಂಗಸಭೆಯಲ್ಲಿ ಟ್ರಂಪ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಇದಕ್ಕೂ ಕೆಲ ದಿನಗಳ ಮುಂಚೆ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ.

ಪಾಕಿಸ್ತಾನ ಸೇನೆ ಮುಖ್ಯಸ್ಥ ಮುನೀರ್‌ ಪ್ರಚೋದನಕಾರಿ ಮಾತುಗಳೇ, ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರಿಗೆ ಪ್ರಚೋದನೆ ನೀಡಿದ್ದವು ಎಂದು ಭಾರತ ಆರೋಪಿಸಿದೆ.

ADVERTISEMENT

ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಮೂಲಕ ಭಾರತ ಮತ್ತು ಪಾಕಿಸ್ತಾನಕ್ಕೆ ನೆರವಾಗಲು ಟ್ರಂಪ್‌ ಆಡಳಿತ ಆಸಕ್ತಿ ಹೊಂದಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಹೇಳಿದೆ.

ಆದರೆ, ಜಮ್ಮು–ಕಾಶ್ಮೀರ ವಿಚಾರ ಉಭಯ ದೇಶಗಳ ನಡುವಿನ ಸಮಸ್ಯೆ. ಈ ವಿಷಯದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆಗೆ ಭಾರತ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ.

‘ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ನಮ್ಮ ಅದ್ಭುತ ಪಾಲುದಾರ ರಾಷ್ಟ್ರ. ಈಗಲೂ, ಉಗ್ರರ ವಿರುದ್ಧ ಪಾಕಿಸ್ತಾನ ಈಗಲೂ ಹೋರಾಟ ನಡೆಸುತ್ತಿದೆ’ ಎಂದು ಅಮೆರಿಕ ಸೇನೆಯ ಸೆಂಟ್ರಲ್‌ ಕಮಾಂಡ್‌ನ ಕಮಾಂಡರ್ ಮೈಕಲ್ ಕುರಿಲ್ಲಾ ಅವರು ಸೆನೆಟ್‌ ಸಮಿತಿಯೊಂದರ ಮುಂದೆ ಹೇಳಿಕೆ ನೀಡಿದ್ದಾರೆ.

ಪಾಕ್‌ ಪ್ರಜೆ ಬಂಧನ ನಕಲಿ ದಾಖಲೆಗಳೊಂದಿಗೆ  ಭಾರತದಲ್ಲಿ ವಾಸವಾಗಿದ್ದ ಪಾಕಿಸ್ತಾನ ಪ್ರಜೆಯನ್ನು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಗ್ರಾಮವೊಂದರಲ್ಲಿ  ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಸಿರಾಜುಲ್‌ ಹಕ್‌ ಬಂಧಿತ ಪಾಕಿಸ್ತಾನ ಪ್ರಜೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.