ADVERTISEMENT

ಹನುಮಂತನ ನಿಂದಿಸಿದ ಅಮೆರಿಕದ ರಾಜಕಾರಣಿ

ಪಿಟಿಐ
Published 23 ಸೆಪ್ಟೆಂಬರ್ 2025, 15:04 IST
Last Updated 23 ಸೆಪ್ಟೆಂಬರ್ 2025, 15:04 IST
ಟೆಕ್ಸಾಸ್‌ನಲ್ಲಿ 90 ಅಡಿ ಎತ್ತರದ ಹನುಮಂತನ ಕಂಚಿನ ಪ್ರತಿಮೆ (ಪಿಟಿಐ ಸಂಗ್ರಹ ಚಿತ್ರ)
ಟೆಕ್ಸಾಸ್‌ನಲ್ಲಿ 90 ಅಡಿ ಎತ್ತರದ ಹನುಮಂತನ ಕಂಚಿನ ಪ್ರತಿಮೆ (ಪಿಟಿಐ ಸಂಗ್ರಹ ಚಿತ್ರ)   

ಹೋಸ್ಟನ್: ಅಮೆರಿಕದ ರಾಜಕಾರಣಿಯೊಬ್ಬರು ‘ಅಮೆರಿಕ ಕ್ರೈಸ್ತರ ದೇಶ’ ಎಂದು ಪ್ರತಿಪಾದಿಸಿ, ಹಿಂದೂಗಳು ನಂಬುವ ಹನುಮಂತನನ್ನು ‘ಸುಳ್ಳು ದೇವರು’ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಅವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. 

ಕಳೆದ ವಾರ ಟೆಕ್ಸಾಸ್‌ನಲ್ಲಿರುವ 90 ಅಡಿ ಎತ್ತರದ ಹನುಮಂತನ ಕಂಚಿನ ಪ್ರತಿಮೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ರಿಪಬ್ಲಿಕನ್ ಪಕ್ಷದ ನಾಯಕ ಅಲೆಕ್ಸಾಂಡರ್ ಡಂಕನ್, ‘ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಸುಳ್ಳು ಪ್ರತಿಮೆಗೆ ನಾವು ಯಾಕೆ ಅನುಮತಿ ನೀಡಿದ್ದೇವೆ? ನಮ್ಮದು ಕ್ರೈಸ್ತ ದೇಶ’ ಎಂದು ಹೇಳಿದ್ದಾರೆ.

ಹಿಂದೂ ಅಮೆರಿಕನ್ ಫೌಂಡೇಷನ್‌ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಹಿಂದೂ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಅಲೆಕ್ಸಾಂಡರ್ ಡಂಕನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಟೆಕ್ಸಾಸ್‌ನ ರಿಪಬ್ಲಿಕ‌ನ್ ಪಕ್ಷಕ್ಕೆ ಆಗ್ರಹಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.