ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ| ಟ್ರಂಪ್-ಬೈಡನ್ ನಿಕಟ ಸ್ಪರ್ಧೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮುಗಿಯದ ಎಣಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:57 IST
Last Updated 4 ನವೆಂಬರ್ 2020, 19:57 IST
ಜೋ ಬೈಡೆನ್‌ ಮತ್ತು ಡೊನಾಲ್ಡ್‌ ಟ್ರಂಪ್‌
ಜೋ ಬೈಡೆನ್‌ ಮತ್ತು ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ 43 ರಾಜ್ಯಗಳಲ್ಲಿ ಪೂರ್ಣಗೊಂಡಿದೆ. ಈ ರಾಜ್ಯಗಳ ಎಲೆಕ್ಟೋರಲ್ ಮತಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಅವರು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಮುನ್ನಡೆ ಸಾಧಿಸಿದ್ದಾರೆ. ಆದರೆ, ಇನ್ನೂ ಏಳು ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಇಬ್ಬರ ನಡುವೆಯೂ ನಿಕಟ ಸ್ಪರ್ಧೆ ಇದೆ.

ಬುಧವಾರ ತಡರಾತ್ರಿ ಎಣಿಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅದರೆ, ನೆವಾಡಾ ರಾಜ್ಯದಲ್ಲಿ ಗುರುವಾರದವರೆಗೆ ಮತಎಣಿಕೆ ಪೂರ್ಣವಾಗಲಾರದು ಎಂದು ಅಲ್ಲಿನ ಚುನಾವಣಾ ಮಂಡಳಿ ಹೇಳಿದೆ. ಹೀಗಾಗಿ ಪೂರ್ಣ ಫಲಿತಾಂಶಕ್ಕಾಗಿ ಗುರುವಾರದವರೆಗೆ (ಭಾರತೀಯ ಕಾಲಮಾನ ಶುಕ್ರವಾರ) ಕಾಯಬೇಕಿದೆ.

ADVERTISEMENT

ಈವರೆಗೆ ಎಣಿಕೆ ಆಗಿರುವ ಒಟ್ಟು ಮತಗಳಲ್ಲಿ ಜೊ ಬೈಡನ್ ಅವರು ಶೇ 50ರಷ್ಟು ಮತ್ತು ಟ್ರಂಪ್ ಅವರು ಶೇ 48.3ರಷ್ಟು ಮತಗಳನ್ನು ಪಡೆದಿದ್ದಾರೆ. ಮತ ಎಣಿಕೆ ಪೂರ್ಣವಾದಾಗ, ಈ ಸಂಖ್ಯೆ ಗಳು ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರಮುಖ ಬ್ಯಾಟಲ್‌ಗ್ರೌಂಡ್ ರಾಜ್ಯಗಳಾದ ಮಿಷಿಗನ್ ಮತ್ತು ಪನ್ಸಿಲ್ವೇನಿಯಾದಲ್ಲಿ ಟ್ರಂಪ್ ಅವರು ಮುನ್ನಡೆ ಸಾಧಿಸಿದ್ದಾರೆ. ಈಗ ಜನರ ಮತದಾನದ ಆಧಾರದ ಮೇಲೆ ಎಲೆಕ್ಟರ್‌ಗಳು ಆಯ್ಕೆಯಾಗುತ್ತಾರೆ. ಇವರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಎಲೆಕ್ಟೋರಲ್ ಮತದಾನವು ಡಿ. 14ರಂದು ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

‘ನ್ಯಾಯಾಲಯಕ್ಕೆ ಹೋಗುತ್ತೇವೆ’

‘ಚುನಾವಣಾ ಅವಧಿ ಮೀರಿದ ನಂತರ ಬಂದ ಇ-ಮೇಲ್ ಮತ ಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಮತಗಳ ಎಣಿಕೆ ಆರಂಭವಾಗಿದೆ. ಇದನ್ನು ತಡೆ ಯಲು ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.‘ಮತದಾನದ ಫಲಿತಾಂಶವು ತಮ್ಮ ವಿರುದ್ಧವಾಗಿ ಇದ್ದರೆ, ಅದರ ಬಗ್ಗೆ ಟ್ರಂಪ್ ಅವರು ತಕರಾರು ತೆಗೆಯುವ ಸಾಧ್ಯತೆ ಇದೆ’ ಎಂದು ರಾಜಕೀಯ ವಿಶ್ಲೇಷಕರು ಈ ಹಿಂದೆಯೇ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.