ADVERTISEMENT

ಉದ್ಯಮಿ, ಭಾರತ ಮೂಲದ 2 ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

ಇರಾನ್‌ನ ಪೆಟ್ರೋಲಿಯಂ ಸಾಗಣೆ ಆರೋಪ; ಅಮೆರಿಕ ಸರ್ಕಾರದಿಂದ ಕ್ರಮ

ಪಿಟಿಐ
Published 11 ಏಪ್ರಿಲ್ 2025, 15:24 IST
Last Updated 11 ಏಪ್ರಿಲ್ 2025, 15:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನ್ಯೂಯಾರ್ಕ್‌/ ವಾಷಿಂಗ್ಟನ್‌: ಇರಾನ್‌ನ ತೈಲ ಸಾಗಣೆಗೆ ನೆರವಾದ ಆರೋಪದಡಿ ಮೇಲೆ ಸಂಯುಕ್ತ ಅರಬ್‌ ಒಕ್ಕೂಟ (ಯುಎಇ) ಮೂಲದ ಭಾರತೀಯ ಉದ್ಯಮಿ ಹಾಗೂ ಭಾರತ ಮೂಲದ ಎರಡು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ ಹೇರಿದೆ.

‘ಜುಗ್ವಿಂದರ್‌ ಸಿಂಗ್‌ ಬ್ರಾರ್‌ ಅವರು ಶಿಪ್ಪಿಂಗ್‌ ಕಂಪನಿಗಳ ಮಾಲೀಕರು. 30 ಹಡಗು ಹೊಂದಿದ್ದಾರೆ. ಇದರಲ್ಲಿ ಹೆಚ್ಚಿನವನ್ನು ಇರಾನ್‌ನ ತೈಲೋತ್ಪನ್ನಗಳ ಸಾಗಣೆಗೆ ಬಳಸಿಕೊಳ್ಳಲಾಗುತ್ತಿತ್ತು’ ಎಂದು ಅಮೆರಿಕದ ಖಜಾನೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಇದಲ್ಲದೇ, ಯುಎಇ ಮೂಲದ, ಬ್ರಾರ್ ನಿಯಂತ್ರಣದಲ್ಲಿರುವ ‘ಗ್ಲೋಬಲ್‌ ಟ್ಯಾಂಕರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಶಿಪ್ಪಿಂಗ್‌ ಕಂಪನಿ, ಪೆಟ್ರೊ ಕೆಮಿಕಲ್ಸ್‌ ಮಾರಾಟ ಸಂಸ್ಥೆ ಬಿ ಆ್ಯಂಡ್‌ ಪಿ ಸೊಲ್ಯೂಷನ್ ಪ್ರೈವೇಟ್‌ ಲಿಮಿಟೆಡ್‌ ಮೇಲೂ ಅಮೆರಿಕ ನಿರ್ಬಂಧವನ್ನು ಹೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.