ADVERTISEMENT

ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಬ್ಲಿಂಕೆನ್‌ ಆಯ್ಕೆ

ಪಿಟಿಐ
Published 26 ಜನವರಿ 2021, 19:17 IST
Last Updated 26 ಜನವರಿ 2021, 19:17 IST
ಆ್ಯಂಟೊನೆ ಬ್ಲಿಂಕೆನ್‌
ಆ್ಯಂಟೊನೆ ಬ್ಲಿಂಕೆನ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಹಲವು ವರ್ಷಗಳಿಂದ ಸಹಾಯಕರಾಗಿದ್ದ ಆ್ಯಂಟೊನಿ ಬ್ಲಿಂಕೆನ್‌ ಅವರನ್ನು ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ಅಮೆರಿಕದ ಸೆನೆಟ್‌ ಮಂಗಳವಾರ ಖಚಿತಪಡಿಸಿದೆ.

58 ವರ್ಷದ ಬ್ಲಿಂಕೆನ್‌ಗೆ 78 ಸೆನೆಟರ್‌ಗಳನ್ನು ಬೆಂಬಲ ನೀಡಿದ್ದು, ಬೈಡನ್‌ ಅವರ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ನಾಲ್ಕನೇ ಸದಸ್ಯರಾಗಿದ್ದಾರೆ. ಶೀಘ್ರದಲ್ಲೇ ಅವರು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. 22 ಸೆನೆಟರ್‌ಗಳು ಬ್ಲಿಂಕೆನ್‌ ವಿರುದ್ಧ ಮತ ಚಲಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT