ADVERTISEMENT

ಚೀನಾ ಒಡ್ಡಿದ ಸ್ಪರ್ಧೆಗೆ ಪ್ರತಿರೋಧ: ಮಸೂದೆಗೆ ಅಮೆರಿಕ ಸೆನೆಟ್‌ ಅನುಮೋದನೆ

ಪಿಟಿಐ
Published 9 ಜೂನ್ 2021, 6:23 IST
Last Updated 9 ಜೂನ್ 2021, 6:23 IST
ಚುಕ್‌ ಶೂಮರ್‌
ಚುಕ್‌ ಶೂಮರ್‌   

ವಾಷಿಂಗ್ಟನ್‌: ಚೀನಾ ಒಡ್ಡಿರುವ ಸ್ಪರ್ಧೆಗೆ ಪ್ರತಿಯಾಗಿ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ವಿಶೇಷ ಪ್ಯಾಕೇಜ್‌ ಘೋಷಣೆ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡ ಮಸೂದೆಗೆ ಅಮೆರಿಕದ ಸೆನೆಟ್‌ ಅನುಮೋದನೆ ನೀಡಿದೆ.

ಜಾಗತಿಕ ಮಟ್ಟದಲ್ಲಿ ಕಂಡು ಬರುತ್ತಿರುವ ಲೂಟಿಕೋರತನ ಪ್ರವೃತ್ತಿಗೆ ಚೀನಾದ ಕಮ್ಯುನಿಸ್ಟ್‌ ಸರ್ಕಾರವನ್ನೇ ಉತ್ತರದಾಯಿತ್ವವನ್ನಾಗಿಸುವ ನಿರ್ಣಯವನ್ನು ಸಹ ಈ ಮಸೂದೆ ಒಳಗೊಂಡಿದೆ.

ಮಹತ್ವದ ಚೀನಾ ವಿರೋಧಿ ಮಸೂದೆಗೆ 68–32 ಮತಗಳಿಂದ ಅನುಮೋದನೆ ನೀಡಲಾಯಿತು. ಸೆನಟ್‌ನ ನಾಯಕ ಚುಕ್‌ ಶೂಮರ್‌ ಅವರು ಈ ಮಸೂದೆಯನ್ನು ಮಂಡಿಸಿ, ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದು ಅವರ ರಾಜಕೀಯ ಜೀವನದ ದೊಡ್ಡ ಗೆಲುವು ಎಂದೇ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕದ ಮುಂಚೂಣಿಯಲ್ಲಿರುವಂತೆ ಮಾಡುವುದು, ಆ ಮೂಲಕ ರಾಷ್ಟ್ರೀಯ ಭದ್ರತೆ ಹಾಗೂ ಆರ್ಥಿಕತೆಯನ್ನು ಸುಧಾರಿಸುವುದು ಈ ಮಸೂದೆಯ ಆಶಯವಾಗಿದೆ. ಇದನ್ನು ಸಾಧಿಸಲು ಅಪಾರ ಮೊತ್ತದ ಹೂಡಿಕೆಗೆ ಮಸೂದೆ ಅವಕಾಶ ಕಲ್ಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.