ADVERTISEMENT

ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಟ್ರಂಪ್‌ ಪ್ರತಿ ಸುಂಕ: ಶೀಘ್ರ ಮಹತ್ವದ ತೀರ್ಪು

ಏಜೆನ್ಸೀಸ್
Published 14 ಜನವರಿ 2026, 16:12 IST
Last Updated 14 ಜನವರಿ 2026, 16:12 IST
ಟ್ರಂಪ್‌
ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು, ಭಾರತವೂ ಸೇರಿದಂತೆ ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇರುವಾಗಲೇ, ಅಲ್ಲಿನ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಲು ಮುಂದಾಗಿದೆ. 

ಯಾವ ವಿಷಯಕ್ಕೆ ಸಂಬಂಧಿಸಿದ ತೀರ್ಪು ಪ್ರಕಟಿಸಲು ಉದ್ದೇಶಿಸಲಾಗಿದೆ ಎನ್ನುವುದನ್ನು ಸುಪ್ರೀಂ ಕೋರ್ಟ್‌ ಮುಂಚಿತವಾಗಿ ಹೇಳಿಲ್ಲ. ಆದರೆ, ಇದು ಹೆಚ್ಚಾಗಿ ಟ್ರಂಪ್‌ ಸುಂಕಕ್ಕೆ ಸಂಬಂಧಿಸಿದ್ದಾಗಿರಬಹುದು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.  

ಟ್ರಂಪ್‌ ವಿರುದ್ಧದ ಸುಂಕ ಪ್ರಕರಣದಲ್ಲಿ, ಅಮೆರಿಕ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್‌ ಪರಿಶೀಲನೆಗೆ ಒಳಪಡಿಸಲಿದೆ. ಈಗಾಗಲೇ ಅಲ್ಲಿನ ಕೆಳ ನ್ಯಾಯಾಲಯಗಳು ಸುಂಕ ಹೇರಿಕೆ ವಿಚಾರದಲ್ಲಿ ಟ್ರಂಪ್‌ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ತೀರ್ಪು ನೀಡಿವೆ. 

ADVERTISEMENT

2025ರಲ್ಲಿ ಅಧಿಕಾರಕ್ಕೆ ಮರಳಿದ ನಂತರ ಟ್ರಂಪ್‌, ಹಲವು ಸಂದರ್ಭಗಳಲ್ಲಿ ಅಧ್ಯಕ್ಷೀಯ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿದ್ದಾರೆ. ಇದು ಜಾಗತಿಕ ಅರ್ಥ ವ್ಯವಸ್ಥೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ ಎಂಬ ಆರೋಪಗಳಿವೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಳಸುವ 1977ರ ಆರ್ಥಿಕ ಅಧಿಕಾರ ಕಾಯ್ದೆ ಜಾರಿಗೊಳಿಸುವ ಮೂಲಕ ಟ್ರಂಪ್‌, ಅಮೆರಿಕದ ಬಹುತೇಕ ವ್ಯಾಪಾರ ಪಾಲುದಾರ ದೇಶಗಳ ಮೇಲೆ, ಪ್ರಮುಖವಾಗಿ ಚೀನಾ, ಕೆನಡಾ, ಮೆಕ್ಸಿಕೊದ ಮೇಲೆ  ಪ್ರತಿ ಸುಂಕ ವಿಧಿಸಿದ್ದಾರೆ ಎಂದು ನ್ಯಾಯಾಧೀಶರು ವಾದಿಸಿದ್ದರು. 

ಈ ಪ್ರಕರಣದ ವಿಚಾರಣೆ ನವೆಂಬರ್‌ 5ರಂದು ನಡೆದಿತ್ತು. ನಂತರ ವಿಚಾರಣೆಯನ್ನು ಮುಂದೂಡಲಾಗಿತ್ತು. ಜನವರಿ 9ರಂದು ಇನ್ನೊಂದು ಪ್ರಕರಣದಲ್ಲಿ  ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಆದರೆ, ಅದರಲ್ಲಿ ಸುಂಕ ವಿಷಯ ಪ್ರಸ್ತಾಪ ಆಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.