ADVERTISEMENT

ಭಾರತ, ಚೀನಾ ಗಡಿ ಸಂಘರ್ಷ: ಸಮಸ್ಯೆ ಬಗೆಹರಿಸಲು ನೆರವಾಗುತ್ತೇವೆ ಎಂದ ಟ್ರಂಪ್

ಪಿಟಿಐ
Published 21 ಜೂನ್ 2020, 3:26 IST
Last Updated 21 ಜೂನ್ 2020, 3:26 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಭಾರತ ಮತ್ತು ಚೀನಾ ಜತೆ ಸಂಪರ್ಕದಲ್ಲಿದ್ದೇವೆ. ಆ ದೇಶಗಳ ನಡುವಣ ಗಡಿ ವಿವಾದ ಬಗೆಹರಿಸಲು ಸಹಾಯ ಮಾಡಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಪರಿಸ್ಥಿತಿ ಕಠಿಣವಾಗಿದೆ. ನಾವು ಭಾರತ ಮತ್ತು ಚೀನಾ ಜತೆ ಮಾತುಕತೆ ನಡೆಸುತ್ತಿದ್ದೇವೆ. ಅವರಲ್ಲಿ ದೊಡ್ಡ ಸಮಸ್ಯೆಯಲ್ಲಿದ್ದಾರೆ’ ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡುವಾಗ ತಿಳಿಸಿದ್ದಾರೆ.

‘ಅವರು ಸಂಘರ್ಷಕ್ಕಿಳಿದಿದ್ದಾರೆ. ಏನಾಗುತ್ತದೆ ಎಂದು ನೋಡೋಣ. ಅವರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಲಡಾಖ್‌ನ ಗಾಲ್ವನ್ ಕಣಿವೆಯ ಬಳಿ ಸೋಮವಾರ ರಾತ್ರಿ ನಡೆದಿದ್ದ ಭಾರತ–ಚೀನಾ ಸೇನಾಪಡೆಗಳ ನಡುವಣ ಸಂಘರ್ಷದಲ್ಲಿ ಸೇನಾಧಿಕಾರಿ ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲೂ ಸಾವು–ನೋವು ಸಂಭವಿಸಿದ್ದವು. ಬಳಿಕ ಚೀನಾ ಗಾಲ್ವನ್ ಕಣಿವೆಯ ಸಾರ್ವಭೌಮತೆಯನ್ನು ಪ್ರತಿಪಾದಿಸಿತ್ತು. ಆದರೆ, ಚೀನಾ ಮಾಡಿರುವ ಪ್ರತಿಪಾದನೆಯನ್ನು ಭಾರತ ಪ್ರಬಲವಾಗಿ ತಳ್ಳಿಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.