ADVERTISEMENT

ಕೋವಿಡ್ ಪರೀಕ್ಷೆ ಕಡ್ಡಾಯ ನಿಯಮ ಕೈಬಿಟ್ಟ ಅಮೆರಿಕ

ಏಜೆನ್ಸೀಸ್
Published 10 ಜೂನ್ 2022, 20:05 IST
Last Updated 10 ಜೂನ್ 2022, 20:05 IST

ವಾಷಿಂಗ್ಟನ್‌: ದೇಶಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರು ಕೋವಿಡ್ –19 ಪರೀಕ್ಷೆಗೆ ಕಡ್ಡಾಯವಾಗಿ ಒಳಪಟ್ಟಿರಬೇಕು ಎಂಬ ನಿರ್ಬಂಧವನ್ನು ಅಮೆರಿಕ ಕೈಬಿಟ್ಟಿದೆ.

ಕೋವಿಡ್‌ ಸಂಬಂಧಿತ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗಿದೆ. ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿ ಕೆವಿನ್‌ ಮುನೊಜ್‌ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಪ್ರಯಾಣ ಸಂಬಂಧಿತ ಉದ್ಯಮದ ಬಲವಾದ ಲಾಬಿಯ ಪರಿಣಾಮ ಈ ವಾರಾಂತ್ಯದಲ್ಲಿ ಕೋವಿಡ್ ಕಡ್ಡಾಯ ಪರೀಕ್ಷೆ ನಿರ್ಬಂಧ ರದ್ದಾಗಲಿದೆ ಎಂದು ಮಾಧ್ಯಮಗಳು ಈ ಬೆಳವಣಿಗೆಯನ್ನು ವ್ಯಾಖ್ಯಾನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT