
ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್
ಕೃಪೆ: ಪಿಟಿಐ
ರಷ್ಯಾ ಮೇಲೆ ನಿರ್ಬಂಧ ಹೇರುವ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿದ್ದಾರೆ ಎಂದು ಅಮೆರಿಕ ಸೆನೇಟರ್ ಲಿಂಡ್‌ಜಿ ಗ್ರಹಾಮ್ ಹೇಳಿದ್ದಾರೆ.
ಈ ಬಗ್ಗೆ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶೀಘ್ರವೇ ಇದನ್ನು ಸಂಸತ್‌ನಲ್ಲಿ ಮಂಡಿಸಲಾಗುತ್ತದೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳನ್ನು ಈ ಕಾನೂನಿನ ಮೂಲಕ ದಂಡಿಸಲಾಗುತ್ತದೆ.
ಈ ಬಗ್ಗೆ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಹಲವು ಸಂಸದರೊಂದಿಗೆ ಹಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಮಸೂದೆಗೆ ಅನುಮೋದನೆ ದೊರಕಿದರೆ, ಇಂಧನ ಸೇರಿ ರಷ್ಯಾದೊಂದಿಗೆ ವ್ಯವಹಾರ ಮಾಡುತ್ತಿರುವ ರಾಷ್ಟ್ರಗಳ ಮೇಲೆ ನಿರ್ಬಂಧ ಹಾಗೂ ಭಾರಿ ಪ್ರಮಾಣದ ತೆರಿಗೆ ಹೇರಲಾಗುವುದು’ ಎಂದು ಗ್ರಹಾಮ್ ಹೇಳಿದ್ದಾರೆ.
ಉಕ್ರೇನ್‌ನೊಂದಿಗೆ ರಷ್ಯಾದ ಶಾಂತಿ ಒಪ್ಪಂದ ವಿಫಲವಾದ ಬೆನ್ನಲ್ಲೇ ಈ ಬೆಳವಣಿಗೆ ಬಂದಿದೆ.
‘ರಷ್ಯಾದಿಂದ ಕಡಿಮೆ ದರದಲ್ಲಿ ಇಂಧನ ಖರೀದಿ ಮಾಡಿ, ಪುಟಿನ್ ಅವರ ಯುದ್ಧಕ್ಕೆ ತುಪ್ಪ ಸುರಿಯುವವರನ್ನು ದಂಡಿಸಲು ಈ ಮಸೂದೆಯು ಡೊನಾಲ್ಡ್ ಟ್ರಂಪ್ ಅವರಿಗೆ ಸಹಾಯ ಮಾಡಲಿದೆ’ ಎಂದು ಹೇಳಿದ್ದಾರೆ.
ಉಕ್ರೇನ್ ವಿರುದ್ಧ ಪುಟಿನ್ ಅವರ ರಕ್ತಪಾತಕ್ಕೆ ಹಣಕಾಸಿನ ನೆರವು ನೀಡುತ್ತಿರುವ ಚೀನಾ, ಭಾರತ ಹಾಗೂ ಬ್ರೆಜಿಲ್ ಮೇಲೆ ಇದರ ಪರಿಣಾಮ ಬೀರಲಿದೆ ಎಂದು ಗ್ರಹಾಮ್ ಬರೆದುಕೊಂಡಿದ್ದಾರೆ.
ಮಸೂದೆ ಮೇಲೆ ‘ದ್ವಿಪಕ್ಷೀಯ ಮತದಾನ‘ ಮುಂದಿನ ವಾರದ ಆರಂಭದಲ್ಲಿ ನಡೆಯಬಹುದು ಎಂದು ಗ್ರಹಾಮ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.