ಕರಾಕಸ್: ವೆನಿಜುವೆಲಾದವಿರೋಧ ಪಕ್ಷ ನ್ಯಾಷನಲ್ ಅಸೆಂಬ್ಲಿಯ ಉಪ ಸಭಾಪತಿ ಎಡ್ಗರ್ ಜಂಬ್ರಾನೊ ಬಂಧನ ವಿರೋಧಿಸಿ ಶನಿವಾರವೂ ದೇಶ ವ್ಯಾಪಿ ಪ್ರತಿಭಟನೆ ಮುಂದುವರಿಯಿತು.
ದೇಶದ್ರೋಹ,ನಾಗರಿಕ ದಂಗೆ ಹಾಗೂ ಸಂಚು ಆರೋಪದ ಮೇಲೆ ಜಂಬ್ರಾನೊ ಅವರನ್ನು ಬುಧವಾರ ಬಂಧಿಸಲಾಗಿತ್ತು.ವಿರೋಧ ಪಕ್ಷದ ಸಂಸದರ ವಿರುದ್ಧ ಸುಪ್ರೀಂ ಕೋರ್ಟ್ ಕೈಗೊಂಡಿದ್ದ ಕ್ರಮಗಳನ್ನು ವಿರೋಧಿಸಿ, ನ್ಯಾಷನಲ್ ಅಸೆಂಬ್ಲಿಯ ನಾಯಕ ಜುವಾನ್ ಗಡೊ ಪ್ರತಿಭಟನೆಗೆಕರೆ ನೀಡಿದ್ದರು. ಇದನ್ನು ಬೆಂಬಲಿಸಿದ್ದಕ್ಕಾಗಿ ಜಂಬ್ರಾನೊ ಅವರನ್ನು ಬಂಧಿಸುವಂತೆಅಧ್ಯಕ್ಷನಿಕೊಲಸ್ ಮಡುರೊ ಆದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.