ADVERTISEMENT

ವಿಡಿಯೊ ನೋಡಿ: ಲ್ಯಾಂಡಿಂಗ್ ವೇಳೆ ಬಿರುಗಾಳಿಗೆ ಅಲುಗಾಡಿದ ದೈತ್ಯ ವಿಮಾನ!

ಲಂಡನ್‌ನ ಹಿಥ್ರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2023, 6:50 IST
Last Updated 29 ಡಿಸೆಂಬರ್ 2023, 6:50 IST
<div class="paragraphs"><p>ಲ್ಯಾಂಡಿಂಗ್ ವೇಳೆ ಬಿರುಗಾಳಿಗೆ ಅಲ್ಲಾಡಿದ ದೈತ್ಯ ವಿಮಾನ!</p></div>

ಲ್ಯಾಂಡಿಂಗ್ ವೇಳೆ ಬಿರುಗಾಳಿಗೆ ಅಲ್ಲಾಡಿದ ದೈತ್ಯ ವಿಮಾನ!

   

ಬೆಂಗಳೂರು: ಲ್ಯಾಂಡಿಂಗ್ ವೇಳೆ ‘ಅಮೆರಿಕ ಏರ್‌ಲೈನ್ಸ್‌’ನ ಬೋಯಿಂಗ್ 777 ಎಂಬ ದೈತ್ಯ ವಿಮಾನ ಭಾರಿ ಬಿರುಗಾಳಿಗೆ ಅಲುಗಾಡಿರುವ ಘಟನೆ ಲಂಡನ್‌ನ ಹಿಥ್ರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿದೆ.

ಘಟನೆ ಬಗೆಗಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ‘ಇದೊಂದು ಭಯಾನಕ ಲ್ಯಾಂಡಿಂಗ್’ ಎಂದು ಅನೇಕರು ಉದ್ಘಾರ ತೆಗೆದಿದ್ದಾರೆ. ‘SKY Tv’ ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡಿದೆ.

ADVERTISEMENT

ಪ್ರಯಾಣಿಕರ ಸ್ಥಿತಿ ಬಗ್ಗೆ ಅಮೆರಿಕನ್ ಏರ್‌ಲೈನ್ಸ್‌ ಯಾವುದೇ ಹೇಳಿಕೆ ನೀಡಿಲ್ಲ.

ಇಂಗ್ಲೆಂಡ್‌ಗೆ Gerrit ಎಂಬ ಚಂಡಮಾರುತ ಅಪ್ಪಳಿಸಿದ್ದು ಅಲ್ಲಲ್ಲಿ ಭಾರಿ ಗಾಳಿ, ಮಳೆಯಾಗುತ್ತಿದೆ. ಬಿರುಗಾಳಿಯ ನಡುವೆಯೂ ಬೋಯಿಂಗ್ 777 ವಿಮಾನವನ್ನು ಲ್ಯಾಂಡಿಂಗ್ ಮಾಡುವ ಸಾಹಸವನ್ನು ಮಾಡಲು ಹೋಗಿ ಎಡವಟ್ಟು ಆಗಿದೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಹಿಥ್ರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅನೇಕ ವಿಮಾನಗಳನ್ನು ರದ್ದು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.